ನವೆಂ 9, 2008

ಬೆಂಗಳೂರಿಗೆ ವರ್ಷಕ್ಕೋಮ್ಮೆ ಜೊತೆಯಾಗಿ ಬರುವ ಕನ್ನಡ ಮತ್ತು ನವೆಂಬರ್ ೧

ಬೆಂಗಳೂರಿಗೆ ಕೆಲ ದಿನಗಳ ಹಿಂದೆ ಕನ್ನಡ ಬಂತು. ತಿಂಗಳವರೆಗೆ ಇರಬಹುದು. ಸಲ ಶಾಸ್ತ್ರೀಯ ಸ್ಥಾನಮಾನ ಕೂಡಾಸಿಕ್ಕಿತು.
ಪತ್ರಿಕೆ ಓದಿ ಖುಶಿಯಾಯಿತು. ನನಗೆ ಶಾಸ್ತ್ರೀಯ ಸ್ಥಾನಮಾನದಿಂದ ಭಾಷೆಗಾಗುವ ಲಾಭಗಳ ಬಗ್ಗೆ ಮಾಹಿತಿ ಸ್ವಲ್ಪ ಕಡಿಮೆಯೆ. ಆದರೂ ಪತ್ರಿಕೆ ಓದಿದ ನಂತರ ಕೇಂದ್ರ ಸರ್ಕಾರ ಕೊಡುವ ಅನುದಾನಗಳ ಬಗ್ಗೆ ತಿಳಿಯಿತು.ಭಾಷಾದ್ಯಯನಕ್ಕೊಂದುಕೇಂದ್ರ,ಅದಕ್ಕೋಂದಿಷ್ಟು ಹಣ.

ಭಾಷೆಗೆ ಆಡುಗರ ಬಾಯಲ್ಲಿ ಸಿಗಬೇಕಾದ ಸ್ಥಾನಮಾನಗಳನ್ನ ಸರ್ಕಾರಿ ಕಡತಗಳಿಗೆ ಸೇರಿಸಿ ಬೆನ್ನು ತಟ್ಟಿಕೊಳ್ಳುತ್ತಿರುವ ಹುಂಬರಬಗ್ಗೆ ನಗು ಬಂತು.
ಕರ್ನಾಟಕದಲ್ಲಿ ಕನ್ನಡ ಸಾಯುತ್ತಿರುವುದಕ್ಕೆ ಕಾರಣ ಹಣದ ಅಥವಾ ಅಧ್ಯಯನಕೇಂದ್ರಗಳ ಕೊರತೆಯಲ್ಲ. ಕನ್ನಡದ ಬಗ್ಗೆ ಆಡುಗನಿಗೆಇರುವ ಅಸಡ್ಡೆ.

ಕನ್ನಡ ಮಾತನಾಡುವವರ ಸಂಖ್ಯೆ ಬೆಂಗಳೂರಲ್ಲಿ ಕಡಿಮೆಯಾಗುತ್ತಿದೆ,ಹಾಗಂತ ಬೆಂಗಳೂರಿಗರಿಗೆ ಕನ್ನಡ ಬರೋದಿಲ್ಲ ಅಂತಅಂದ್ಕೊಬೇಡಿ, ಬರುತ್ತೆ ಆದ್ರೆ ಅವ್ರು ಮಾತಾಡೊದಿಲ್ಲ. ಅವಶ್ಯಕತೆ ಇಲ್ಲ

ಈ ಬ್ಲಾಗ್ ಅನ್ನು ಹುಡುಕಿ