ಜೂನ್ 21, 2008

ಆತ್ಮದ ಕತೆ ಓದಿದ ನಂತರ ನಕ್ಕಿದ್ದು

ಇವತ್ತು ಬೆಳಿಗ್ಗೆಯಿಂದ ಸುಮ್ಮನೆ ಮನೆಯಲ್ಲಿ ಕುಳಿತಿದ್ದೆ. ಯಾಕೊ ನಾ ದಿನಾ ಮಾಡುತ್ತಿದ್ದ ಕೆಲಸಗಳೆಲ್ಲಾ ಬೇಸರ ತಂದಿದ್ದವು.
ಮಧ್ಯಾಹ್ನ ಈಟಿವಿಯಲ್ಲಿ ಆ ದಿನಗಳು ಸಿನೆಮಾ ಬರುತ್ತೆ ಅಂತ ಗೊತ್ತಾಗಿ ಸಿನಿಮಾಕ್ಕೊಸ್ಕರಾನೆ ಕಾಯ್ತಿದ್ದೆ.

ಪ್ರತಿಯೊಂದು ಅಡ್ವಟೈಸನ್ನೂ ಯಮಯಾತನೆ ತರಹ ಅನುಭವಿಸಿದ್ದಾಯ್ತು. ಇನ್ನೆನು ೪:೩೦ ಗೆ ಸಿನೆಮಾ ೪:೨೦ ಕ್ಕೆ ಕರೆಂಟು ಹೊಯ್ತು.
ಈ ಮುಂಚೆ ಯಾವತ್ತೂ ೫ ನಿಮಿಶಕ್ಕಿಂತ ಜಾಸ್ತಿ ಕರೆಂಟು ಹೊಗಿದ್ದು ಇಲ್ಲ. ಆದ್ರೆ ಇವತ್ತು ೬:೦೦ ಗಂಟೆವರ್ಗೂ ಕರೆಂಟು ಬರ್ಲಿಲ್ಲ.ಮಲಗಿಕೊಂಡೆ.

ಎದ್ದ ಮೇಲೆ ಸ್ವಲ್ಪ ಸುಮ್ಮ್ನೆ ಸ್ವಲ್ಪೊತ್ತು ಕೂತ್ಕೊಂಡು ಧ್ಯಾನ ಮಾಡೋ ಪ್ರಯತ್ನ ಮಾಡಿದೆ.ಯಾಕೊ ಮನ್ಸ್ಸಾಲಿಲ್ಲ.
ಆಮೇಲೆ ಕೈಗೆ ಸಿಕ್ಕ ಬ್ಲೊಗ್ ಗಳನ್ನು ಓದುತ್ತಿದ್ದೆ.ಬಹಳಷ್ಟು ಬ್ಲೊಗ್ ಗಳು ಆಧ್ಯಾತ್ಮದ ಕತೆ ಹೇಳುತ್ತಿದ್ದವು.

who will cry when i die ಅಂತ ಮುಂಬಯಿಯ ಚಿಕ್ಕ ಹುಡುಗಿ ಬರೆದ ಕವನ ಓದಿ ವಿಚಿತ್ರ ಅನ್ನಿಸಿತು. ಆತ್ಮ ಮತ್ತು ದೇಹದ ಕಲ್ಪನೆಯನ್ನ ಅರಗಿಸಿಕೊಳ್ಳುವುದು ಆಗಲಿಲ್ಲ.ಸತ್ತ ಮೇಲೆ ಆತ್ಮ ಕ್ಕೆ ಮತ್ತೆ ಹೊಸ ಜೀವ ಅಂತ ಬರೆದ ಕಲ್ಪನೆಯ ಬಗ್ಗೆ ನಗು ಬಂತು.
ಆತ್ಮದ ಅರಿವು ನಮಗೆ ಬರಬಹುದಾದರೆ ಅದಕ್ಕೆ ನಮ್ಮ ಅರಿವಿದೆಯೆ ?

ನನಗೆನೋ ಸತ್ತ ಮೇಲೆ ಬದುಕೋ ಯೋಚನೆ ಮಾಡೊ ಜನರ ಬಗ್ಗೆ ವಿಚಿತ್ರ ನಿರಾಸಕ್ತಿ. ವಿಷಯ ನನ್ನ ಅಭಿಪ್ರಾಯ ಹೊರತು ಆ ಹುಡುಗಿಯ ಕವನದ ಬಗೆಗಿನ ಯಾವುದೇ ರೀತಿಯ ವಿಮರ್ಶೆಯಲ್ಲ. ನನಗೆ ಆಶ್ಚರ್ಯವಾಗಿದ್ದು ಆ ಹುಡುಗಿಯ ವಯಸ್ಸು ಮತ್ತು ಕವನದ ನಡುವಿನ ಅಂತರ.

ನಾನ್ಯಾವತ್ತು ೨೦ ಮುಟ್ಟದ ಹುಡುಗ ಹುಡುಗಿ ಆತ್ಮ ಮತ್ತು ದೇಹದ ಬಗ್ಗೆ ಮಾತಾಡಿದ್ದನ್ನ ನೋಡಿರಲಿಲ್ಲ. ಅಷ್ಟೇ ಏಕೆ ಈಗಲೂ ನನ್ನಲ್ಲಿ ಬದುಕಿನ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಇಲ್ಲ.

ಯಾವುದು ಪ್ರೀತಿ,
ಯಾವುದು ನೀತಿ,
ಬದುಕಿಗೆ ಬಂದ್ದದ್ದೇ ಸೊಗಸು.

ಸಂಪೂರ್ಣವಾಗಿ ಸಮಯದ ಗುಲಾಮಗಿರಿ.ನಾನು ನನಗೆ ಅಂತ ಇಟ್ಟು ಕೊಂಡಿರುವ ಕನಸುಗಳಲ್ಲಿ, ಬದುಕನ್ನ ಸಲೀಸಾಗಿಸುವುದಿದೆಯೆ ಹೊರತು ,
ನನ್ನ ಬದುಕಿನ ಅರ್ಥ,ಕಾರಣ,ಗುರಿ ಅಂತಾ ನಾನು ಯೋಚನೆ ಮಾಡೋದು ನಿಲ್ಲಿಸಿಯಾಗಿದೆ.

ನಾನು ಹುಡುಕಲು ಪ್ರಯತ್ನ ಮಾಡಿದಾಗಲೆಲ್ಲ ನನಗೆ ದೊರೆತ ಸಮಾಧಾನಕರ ಉತ್ತರ ಬದುಕುವುದು, ಮತ್ತು ನಮ್ಮಷ್ಟಕ್ಕೆ ನಾವೆ ಬದುಕುವುದು ಅಂತ.
ಸಮಾಜ ಸೇವೆ ಅಂತ ಭಾಷಣ ಮಾಡೋ ಜನ ಸಿಕ್ಕಾಗೆಲ್ಲಾ,ಅವರಿಗಾಗಿ ಅದನ್ನ ಇವರಿಗಾಗಿ ಇದನ್ನ ಮಾಡ್ಬೇಕು ಅಂತ ಮಾತು ಕೇಳಿದಾಗಲೆಲ್ಲಾ
"ರಾಮ ಹುಟ್ಟಿದ್ದು ಕೊಲ್ಲೋಕೆ
"ಆದ್ರೆ ರಾವಣ ಹುಟ್ಟಿದ್ದು ಕೊಲ್ಲಿಸ್ಕೋಳ್ಳೋಕಾ ?.
ರಾಮ ಹುಟ್ಟಿದ್ದಕ್ಕೆ ಕಾರಣ ಹೇಳೋ ಜನ ಅಂತ ಅನ್ನಿಸುತ್ತೆ. ಬದುಕನ್ನ ನಮ್ಮಷ್ಟಕ್ಕೆ ನಾವೇ ಬದುಕುವುದೆ ಬದುಕಿನ ಗುರಿ. ಹಂಗಂತ ರಾಮಾಯಣದ ಮತ್ತು ರಾಮ ತಪ್ಪಂತ ಅಲ್ಲ, ರಾವಣ ಸೀತೆಯನ್ನ ಕದ್ದ, ರಾಮ ರಾವಣನ್ನ ಕೊಂದ.
ಸಮಾಜ ಸೇವೆ ಅನ್ನೋದು ನನ್ನ ಮಟ್ಟಿಗೆ ನಾನು ನಿಷ್ಟೆಯಿಂದ ಬದುಕುವುದರ ಉಪ ಉತ್ಪನ್ನ"(by product)".

ಜೂನ್ 14, 2008

ನೆನಪಾಗಿ ಕಾಡುತ್ತಿರುವ ಆಡದ ಮಾತುಗಳು ಮತ್ತು ಬೆಳದಿಂಗಳ ಬಾಲೆ

ಮತ್ತೆ ಬೆಳದಿಂಗಳ ಬಾಲೆ ಸಿನೆಮಾ ನೋಡಿದೆ. ಮೊದಲಿನಂತೆ ಸಲ ಕೂಡ ಬಹಳ ಚೆನ್ನಾಗಿದೆ ಅನ್ನಿಸಿತು.
ಅನಂತ್ನಾಗ್ ಬೊಂಬಟ್ ಅಭಿನಯ , ಸುಮನ್ ನಗರ್ಕರ್ ಮುದ್ದು ಮುಖ,ಸುನಿಲ್ ಕುಮಾರ್ ದೆಸಾಯಿಯವರ ಒಳ್ಳೆನಿರ್ದೇಶನ ಎಂಥವರನ್ನು ಮರುಳುಮಾಡಬಲ್ಲ ಕತೆ.

ಮೊದಲನೆ ಸಲ ಸಿನೆಮಾ ನೋಡಿದಾಗ ಕೊನೆಗೆ ಕಣ್ಣೀರಿಟ್ಟಿದ್ದೆ.ನನ್ನ ಬೆಳದಿಂಗಳ ಬಾಲೆ ನನ್ನ ಕೈತಪ್ಪದಿರುವಂತೆಎಚ್ಚರಿಕೆಯಿಂದಿರಬೇಕು ಅಂತ ನಿರ್ಧಾರ ಕೂಡಾ ಮಾಡಿದ್ದೆ. ಆದರೆ ನಾನು ತುಂಬಾ ಚಿಕ್ಕವನಾಗಿದ್ದೆ ಆಗ ನನಗೆ ಅಂಥಾ ಬಾಲೆಯಸ್ವಂತದ ಒಂದು ಸಣ್ಣ ಕಲ್ಪನೆಯೂ ಇರಲ್ಲಿಲ್ಲ.
ಆದರೆ ಸಿನೆಮಾ ನೋಡಿ ಒಬ್ಬ ಬಾಲೆ ಇರಲೇಬೇಕು ಅನ್ನೊ ಸತ್ಯ ಅಷ್ಟೋ ಇಷ್ಟೊ ಗೊತ್ತಾಗಿತ್ತು.

ಬೆಲದಿಂಗಳಬಾಲೆಯ ಹುರುಪಿನಲ್ಲೆ ನನ್ನವಳಲಲ್ಲದ ನನ್ನವಳಿಗಾಗಿ ಪತ್ರ ಮತ್ತು ಕವನಗಳನ್ನ ಬರೆಯಲು ಶುರು ಮಾಡಿದೆ. ಪತ್ರಬರೆಯಲು ಕುಳಿತಾಗ ಶಬ್ದಗಳಿಗಾಗಿ ತಡಕಾಡಿದೆ,ಹೇಗೆ ಶುರು ಮಾಡಬೇಕು ಅಂತ ಗೊತ್ತಾಗದೆ ನರಳಿದೆ.ಸುಮಾರು ಶಬ್ದಗಳನ್ನಬರೆದು ಕಾಗದ ಹರಿದು ಹಾಕಿದೆ!

ಹಾಗೋ ಹೀಗೋ ಕಷ್ಟಪಟ್ಟು ನನಗೆ ಸಮಾಧಾನವಾಗೊ ಹಾಗೆ ಬರೆದ ಮೇಲೆ ಮನೆಯಲ್ಲಿ ಯಾರಿಗೂ ಕಾಣದಂತೆ ಅದನ್ನ ಬಚ್ಚಿಟ್ಟುಕಾಪಾದಿದ್ದು ಆಯ್ತು. ಹಾಗೆ ನಾ ಬರೆದ ಕವನಗಳಲ್ಲಿ ಕೆಲವನ್ನು ಈಗಾಗಲೆ ತೆರೆದಿಟ್ಟಿದಾಗಿದೆ.

ಆದರೆ ಎಲ್ಲಾ ಕವನಗಳನ್ನು ನಾನು ಕನಸಿನ ಬಾಲೆಗಾಗಿ ಬರೆದಿಲ್ಲ. ಒಬ್ಬಳು ಸಿಕ್ಕಿದ್ದಳು, ಅವಳೆ ನಾ ನೆನೆಸುತ್ತಿದ್ದ ಬೆಳದಿಂಗಳಬಾಲೆಅಂತ ಅಂದ್ಕೊಂಡ್ಡಿದ್ದೆ. ಅವಳಿಗೆ ಕವನ ತೋರಿಸೋದು ಬಿಡಿ,ನನ್ನ ಭಾವನೆಗಳನ್ನು ಅವಳೆದುರಿಗೆ ಸರಿಯಾಗಿ ಹೇಳೋದೂ ಸಾಧ್ಯಆಗಲಿಲ್ಲ.ಅವಳಿಗೆ ಅರ್ಥ ಮಾಡಿಸುವ ಪ್ರಯತ್ನ ನಾನು ಜಾಸ್ತಿ ಮಾದಲ್ಲಿಲ್ಲ ಯಾಕಂದ್ರೆ ಅವಳಿಗೆ ಕನ್ನಡ ಗೊತ್ತಿರಲಿಲ್ಲ :).

ಯಾಕೊ ಕನ್ನಡತಿಯಲ್ಲದ ಬಾಲೆ ಬೆಳದಿಂಗಳವಳಲ್ಲ ಅಂತ ಸುಮ್ಮನಾದೆ. ಆದರೆ ಒಂದು ಬಲವಾದ ಪ್ರಯತ್ನ ನಾನು ಮಾಡಲೇಇಲ್ಲ !
ಆಮೆಲೆ ನಿಟ್ಟಿನಲ್ಲಿ ನನ್ನ ಹುಡುಕಾಟ ನಿಂತು ಹೊಗಿತ್ತು.ಬೇರೆಲ್ಲೋ ಗಮನ ಹರಿದು ಹೋಗಿತ್ತು.

ಮತ್ತೆ ಸಿನೆಮಾ ನೋಡಿದಾಗ, ಇದೆಲ್ಲಾ ಮತ್ತೆ ನೆನಪಾಯಿತು. ನಾನಾಡದ ಮಾತು ಮತ್ತೋಮ್ಮೆ ನೆನಪಾಯಿತು. ಆದರೆ ಸಲನಾನು ಕಣ್ಣಿರಿಡಲಿಲ್ಲ. ಹದವಾಗಿ ನಕ್ಕು ಸುಮ್ಮನಾದೆ.ಏಕೆಂದರೆ ನನಗೆ ಗೊತ್ತಾಗಿತ್ತು ಕಾಲನ ಪೆಟ್ಟಿಗೆ ಕಲ್ಪನೆ ಕೂಡಾನಾಶವಾಗುವುದೆಂದು.

ಜೂನ್ 11, 2008

ನನ್ನ ಕಲ್ಪನೆ ಎಲ್ಲೋ ನಿನ್ನ ಹುಡುಕಿ ಹೋಯ್ತು

ಕಣ್ಣಿಗೆ ಕಾಣದೆ ಸಂತಸ ತರುತ್ತಿರುವ ನಿನ್ನ ಕಲ್ಪನೆಗಳಿಗೆ ಸಾಟಿಯಾಗಬಲ್ಲೆಯಾ ನೀನು ?
ಸಾಟಿಯಾದರೆ ನೀ ನನ್ನ ಕಲ್ಪನೆಗೂ ಮೀರಿದ ಸಂತೋಷವೇ ?

ಈ ಬ್ಲಾಗ್ ಅನ್ನು ಹುಡುಕಿ