ಅಕ್ಟೋ 4, 2010

ಗುಳುಂ ಗುಳುಂ

ಬರ ಬಂದಾಗ ಹಣ ಕೂಡಿಸಿ
ಮಾಡಿದ್ದೇನೋ ಗುಳುಂ ಗುಳುಂ

ಮನೆ ಕಟ್ಟಾಕೆ ಬಜೆಟ್ ಮಾಡಿ
ಮಾಡಿದ್ದೇನೋ ಗುಳುಂ ಗುಳುಂ

ಬಂದರಿನ್ಯಾಗೆ ಅದಿರು ಕದ್ದು
ಮಾಡಿದ್ದೇನೋ ಗುಳುಂ ಗುಳುಂ

ಒಲಂಪಿಕ್ ಆಟ ಆಡಿಸಿ
ಮಾಡಿದ್ದೇನೋ ಗುಳುಂ ಗುಳುಂ

ವೋಲ್ವೋ ಬೆಂಜ್ ರೋಡಿಗೆ ತಂದು
ಮಾಡಿದ್ದೇನೋ ಗುಳುಂ ಗುಳುಂ

ಶಿವನ ತಲೆಯ ಗಂಗೆ ಕೂಡ ಕೊಳಕಾದಳು ಇಲ್ಲಿ
ಗುಳುಂ ಬಾಕರ ಸ್ನಾನ ಪೂಜೆ , ಪಾಪಕ್ಕೆ ಜಾಗ ಮತ್ತೆಲ್ಲಿ ?

ಮೇ 30, 2010

ದೊಂಬರು ಬಂದರು ದೊಂಬರು

ನಿನ್ನೆ ಬಂಗಾರಿ ೨೪ * ೭ ನ್ಯೂಸ್ ಚಾನೆಲ್ಲಿನ ಎಕ್ಷ್ಕ್ಲುಸಿವ್ ನ್ಯೂಸ್ ಏನಪ್ಪಾ ಅಂದ್ರೆ , ಅಲ್ಲಿ ದುರ್ಗದಲ್ಲಿ ಯಾವನೋ ಕುಡುದು ಮರ ಹತ್ತಿದ್ದನಂತೆ , ಸುಮಾರು ಹೊತ್ತು ಕಷ್ಟ ಪಟ್ಟು ಜನ ಅವನನ್ನ ಕೆಳಗೆ ಇಳ್ಸಿದ್ರಂತೆ, ಸ್ವಲ್ಪ ಹೊತ್ತಾದ ಮೇಲೆ ಅವನು ನೀರಿನ ಟ್ಯಾಂಕ್ ಮೇಲೆ ಹೋಗಿ ಕೂತ್ಕಂಡ್ನಂತೆ, ಅವನನ್ನ ಪೊಲೀಸರು ಜನಗಳು ಕಷ್ಟ ಪಟ್ಟು , ಹರ ಸಾಹಸ ಮಾಡಿ ಕೆಳಗೆ ಇಳಿಸಿದರಂತೆ .

ಅಲಾಲಲ ಸಿಂಗ್ರಿ, ಅವನ ಜೊತೆಗೆ ನೀನು ಕೂತ್ಕಂಡು ಪೆಗ್ಗ್ ಹಾಕಿತಿದ್ದ್ಯ ಮಗಾ , ಅದ್ಯಾವ ಸೀಮೆ ಕಳ್ಳಬಟ್ಟಿಸಾರಾಯಿ ಕುಡಿದಿಯೋ, ನಿನ್ನ ಗೆಳೆಯ ಗಿಡ ಹತ್ತಿದ್ದು ಕ್ಯಾಮೆರದಾಗ ಹಿಡ್ಕೊಂಡು ದೊಡ್ಡ ನ್ಯೂಸ್ ಅನ್ನಂಗೆ ತೋರಿಸಿ ಬಿಟ್ಟೆ , ಅಲಾಲ ಸಿಂಗ್ರಿ , ನಿಮ್ಮು ರೀಡರ್ ಪ್ರಶ್ನೆ ಮೇಲೆ ಪ್ರಶ್ನೆ , ಇದು ಎಸ್ತೋತ್ತಿಗಾಯ್ತು , ಎಂಗಾಯ್ತು , ಜನ ಎನ್ಮಾಡ್ತಿದ್ದರೆ ಕೇಳಿದ್ದೆ , ಕೇಳಿದ್ದು .... ಸಿಂಗ್ರಿ .. ಸಿಂಗ್ರಿ ಕಿಸ್ಕಂಡು,ಕಿಸ್ಕಂಡು ಹೇಳಿದ್ದೆ .. ಹೇಳಿದ್ದು

ಸಿಂಗ್ರಿ ಕಡಿಮೆ ಕುಡಿ ಕಣ್ಲಾ, ನೀರಿನ ಟ್ಯಾಂಕ್ ಹತ್ತಿದರೆ ಕೆಳಗೆ ಇಳಸಬಹುದು, ನ್ಯೂಸ್ ನ ಚಟ್ಟ ಹತ್ತಿಸ್ದ್ರೆ ಇಳ್ಸಾಕಾಗಕಿಲ್ಲ . ಸುವರ್ಣ ಅಂದ್ರೆ ಬಂಗಾರ ಕಣ್ಲಾ , ಸುವರ್ naa ಅಂತ ಅಲ್ಲ ...

ಮೇ 28, 2010

ಮತ್ತು, ಮತ್ತು, ಮತ್ತು ಗಮ್ಮತ್ತು

ಎದೆಯ ಬಡಿತ ನಿಲ್ಲುವುದನೆ
ಕಾಯುತಿರುವ ಮಿದುಳ ಮಿಡಿತ
ಹೃದಯವನ್ನ ಬಗೆಯುತಿರುವ, ಚಿಂತೆ ಕೊರೆತ
ಮೀರಿ ನಿಂತು ಮೆಟ್ಟಿಬಿಡುವುದು ,
ಮದಿರೆ ನಿನ್ನ ಹೀರುವ ತವಕ

ಗತ್ತಿನಲ್ಲಿ ಹೀರುವಾಗ , ಮತ್ತಿನಲ್ಲಿ ತೇಲುವಾಗ
ಯಾವ ಖುಶಿಯು ಸಾಟಿ ಹೇಳು ನೋವೆ ಮರೆತು ಹೋಗುವಾಗ
ನಿನ್ನ ರುಚಿಯ ಸವಿಯಲಿಕ್ಕೆ ಬೇಕು ಮನಕೆ ಬೇಸಿಗೆ
ಅರ್ಥವಾಗದು ಎಂದಿಗೂ ಕಹಿಯ ಸವಿಯು ಜಿಹ್ವೆಗೆ

ಮದಿರೆ ನಿನ್ನ ಮುತ್ತಿಗೆ , ನೀ ಕೊಡುವ ಮತ್ತಿಗೆ
ಗಮ್ಮತು , ಆಹ್ಲಾದ ಇಂದೇ ನನ್ನ ಬುಟ್ಟಿಗೆ
ನೀನೊಬ್ಬಳೆ ಸುಂದರಿ , ಆಗಬೇಡ ತಾಟಕಿ
ತೇಲಬೇಕು ನಾನು ಈಗ , ತೆವಳಲಾರೆ ನರ್ತಕಿ







ಕಿಮ್ಮತ್ತು

ಕತ್ತಲೆ ಇರದೆ ಬೆಳಕಿಗೆ ಏನಿದೆ ಕಿಮ್ಮತ್ತು ?
ಹಸಿವೆಯು ಇರದೆ ಅನ್ನಕೆ ಏನಿದೆ ಕಿಮ್ಮತ್ತು ?

ಸೋಲೇ ಇಲ್ಲದೆ ಗೆಲುವಿಗೆ ಏನಿದೆ ಕಿಮ್ಮತ್ತು ?
ದುಃಖವು ಇರದೆ ಸಂತಸ ಕ್ಕೆನಿದೆ ಕಿಮ್ಮತ್ತು ?

ಸಾವೇ ಇರದೆ ಬದುಕಿಗೆ ಏನಿದೆ ಕಿಮ್ಮತ್ತು ?


ಕತ್ತಲೆಯಿಂದ ಬೆಳಕಿನೆಡೆಗೆ
ಬೆಳಕಿನಿಂದ ಕತ್ತಲೆಯೆಡೆಗೆ

ಹಸಿವಿನಿಂದ ಅನ್ನದೆಡೆಗೆ
ಅನ್ನದಿಂದ ಹಸಿವಿನೆಡೆಗೆ

ದುಃಖದಿಂದ ಸಂತಸದೆಡೆಗೆ
ಸಂತಸದಿಂದ ದುಃಖದೆಡೆಗೆ

ವಿಧಿ ನಡೆಸುವ ದಾರಿಯ ಗುರುತು ಗೊತ್ತಾಗುವುದು ಎಲ್ಲರಿಗೂ
ಸಾವು - ಬದುಕಿನ ಪಯಣದ ಹಾದಿ ತಿಳಿದೇ ಇಲ್ಲ ಯಾರಿಗೂ

ಮೇ 6, 2010

24 X 7 ನ್ಯೂಸ್ ಚಾನೆಲ್ಲುಗಳ ದೊಂಬರಾಟ

ಬೇಡಲು ಬರ್ತಿದ್ದ ದೊಂಬರಿಗೆ ಬರುತ್ತಿದ್ದದ್ದು ಒಂದೇ ಒಂದು ನಾಟಕ , ಅದು ಶ್ರೀ ರಾಮಾಯಣ.
ಮುಖಕ್ಕೆ ನೀಲಿ ಬಣ್ಣ ಹಾಕಿಕೊಂಡ ರಾಮ , ಬಾಲವಿದ್ದ ಹನುಮಂತ ,ಸೀತೆ.
ಒಂದು ಹಾರ್ಮೋನಿಯಂ ಮತ್ತು ರಾಮನ ಅವತಾರ , ರಘುಕುಲ ಸೋಮನ ಅವತಾರ ಹಾಡಿನ ಒಂದು ಪ್ಯಾರ ಇಷ್ಟರಲ್ಲೆ  ದೊಂಬರ ಬದುಕು.

ಅದೇ ಹಾಡನ್ನ ಊರಿನ ಮನೆ ಮನೆಗೂ ಹೋಗಿ , ಹಾಡುತ್ತಿದ್ದ ದೊಂಬರು ಬೇಡಲು ಬರುತ್ತಿದ್ದದ್ದು ವರ್ಷಕ್ಕೆ ಒಂದೇ ಸಾರಿ , ಹಾಗಾಗಿಅದೇ ಹಾಡು ಯಾರಿಗೂ ಬೇಸರ ತರುತ್ತಿರಲ್ಲಿಲ್ಲ , ಊರೂರು ತಿರುಗಿ ಬದುಕುತ್ತಿದ್ದ ದೊಂಬರಿಗೆ  ಎರಡನೇ ಹಾಡಿನ ಅವಶ್ಯಕತೆಇರಲ್ಲಿಲ್ಲ .
ಇತ್ತೀಚಿಗೆ ಬಹುಶಃ
ದೊಂಬರು ಕೂಡ ಬದುಕಲು ಬೇರೆ ಮಾರ್ಗಗಳನ್ನ ಹುಡುಕಿಕೊಂಡಿದ್ದಾರೆ.

ಈಗ ಹೊಸ ತರಹದ ದೊಂಬರು ಬಂದಿದ್ದಾರೆ . ಸಾಮಾಜಿಕ ಜವಾಬ್ದಾರಿ ಇದೆ ಎಂದು ಬೀಗುವ , ಸಾಕಷ್ಟು ಶಕ್ತಿವಂತರಾಗಿರುವ,ಎಲ್ಲರ ಮನೆಯಲ್ಲೂ ಒಂದೇ ಸಾರಿ ಹಾಡಬಲ್ಲ , ಸಾಕಷ್ಟು ವಿದ್ಯಾವಂತರಾಗಿರುವ , ವಿಚಾರವಂತರೆಂಬ ಹುಸಿ ನಂಬಿಕೆಯ ಮೂಡ ಜನ. ಯಾರು ಗೊತ್ತಾಯ್ತ 24 X 7 ನ್ಯೂಸ್ ಚಾನೆಲ್ಲುಗಳು , ಹಾಡಿದ್ದೆ ಹಾಡೋ ಕಿಸಬಾಯಿ ದಾಸರು .

ದುರಂತ ಅಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ
ದೊಂಬರು ಇವರು .

ಇತ್ತೀಚಿಗೆ breaking news ಅಂತ ಇವರು ತೋರಿಸಿದ headline gotta ?
karnataka rape case CID to probe ಇದು ನ್ಯಾಷನಲ್ ಲೆವೆಲ್ ದೊಂಬರ ಕತೆ .
ಏನಪ್ಪಾ ಕರ್ನಾಟಕ rape ಅಂದ್ರೆ ?, ರಾಮಾಯಣದ ಹಾಡು ದೊಂಬರು ತಪ್ಪು ಹಾಡಿದರೆ ಪರವಾಗಿಲ್ಲ , ಈ ವಿದ್ಯಾವಂತರು ಹೇಳೋ ಸ್ಪಷ್ಟತೆ ಹೇಗಿದೆ ನೋಡಿ ?

ಇಪ್ಪತ್ನಾಲಕ್ಕು ಗಂಟೆ ಸಮಾಚಾರ ಹೇಳ್ತಿವಿ ಅಂತ ಬೊಗಳೆ ಬಿಡೋ ಇವರತ್ರ ಇರೋ ಸಮಾಚಾರದ ಯೋಗ್ಯತೆ ಏನು ಅಂತ , ಇವ್ರು ಪದೇ ಪದೇ ತೋರಿಸೋ ವೀಡಿಯೊ ಕ್ಲಿಪ್ಪುಗಳು , ಸಿನಿಮ ನಟರ ಸುದ್ದಿ ಹೇಳೋವಾಗ ಬರುವ ಮಾದಕ ದೃಶ್ಯಾವಳಿ , ಅಷ್ಟೇ ಯಾಕೆ ಮೊನ್ನೆ ಸಾನಿಯಾ ಮದುವೆ ಟೈಮಲ್ಲಿ ಇವರು ತೋರಿಸಿದ ಅವಳ ಅರೆ ಬಟ್ಟೆ ಫೋಟೋ ಗಳು ಸಾರಿ ,ಸಾರಿ ಹೇಳುತ್ತವೆ.

ಇವರು ಸಮಾಚಾರದ ಹೆಸರಲ್ಲಿ ಮಾರುತ್ತಿರುವುದು 24 X 7 ಮಸಾಲ . ಇತ್ತೀಚಿಗೆ ಈ ಸಾಮಾಜಿಕ ಕಳಕಳಿಯ ಕಳ್ಳರು ಸರ್ಕಾರದ ಭವಿಷ್ಯವನ್ನು ಕೇಳಲಿಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳಾಡೋ ಜಗಳಕ್ಕೆ , ಸರ್ಕಾರದ ಗ್ರಹ ಗತಿ ಕಾರಣ , ಕರ್ನಾಟಕ ದ ಜನ ಇನ್ನ ಕುಂಡಲಿ , ಸಮಯ ನೋಡಿ ಓಟು ಹಾಕಬೇಕು. ವಿದ್ಯಾವಂತ , ಪ್ರಜ್ಞಾವಂತರು  ಜನಕ್ಕೆ ಸಮಾಚಾರದಲ್ಲಿ ತೋರಿಸಿತ್ತಿರುವುದು , ರಾಹು , ಕೇತು ಗಳ ಪೋಷಿಷನ್ನು .

ಛಿ , ಥೂ!! ,
ಛಿ , ಥೂ!!





ಮೇ 4, 2010

ಮಿನಿಸ್ಟ್ರಾಯ್ತಿಯ

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಆಸ್ಪತ್ರಿಗೆ ಹೋಗ್ತಾರೆ .
ನರಸಮ್ಮ ನ್ನ ನೋಡಾಕೆ .

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಬೇರೆಯವರ ಮನಿಗೆ ಹೋಗ್ತಾರೆ .
ಅವ್ರಿಗೆ ಆರಾಮಿರಕಿಲ್ಲ .

ಟಿವಿ ದೊರು ಕಮ್ಮಿ ಇಲ್ಲ .
ಮಿನಿಸ್ಟ್ರ ಮನಿಗೆ ಹೋಗ್ತಾರೆ .
ಮಿನಿಸ್ಟ್ರು ಮನಿಗೆ ಹೊಗಾಕಿಲ್ಲ .


ಇದೇನು ಬಂತೋ ಗ್ರಹಚಾರ
ಯಾರು ಎಲ್ಲಿ ಹೋದರು
ಮೊಬೈಲ್ ಕ್ಯಾಮರ ಬಿಡಾಕಿಲ್ಲ .

ಕ್ಯಾಮರದಾಗ ಎಲ್ಲರು
ಉಮೇಶ್ ರೆಡ್ಡಿ ಪಡಿಯಚ್ಚು .
ಅದ್ರೂನು ರಾಮನೇ ಎಲ್ಲರಿಗು ಅಚ್ಚು ಮೆಚ್ಚು .

ಟಿವಿದೊರು ಕಮ್ಮಿ ಇಲ್ಲ .
ಅವ್ರ ಸುದ್ದಿ ಬರಂಗಿಲ್ಲ .
ಕೇಸು ಮುಗಿದ ಮೇಲೆ ಕಳದ ಮಾನ ಕೊಡಂಗಿಲ್ಲ .

ಕೋಡಂಗಿ ಮಾರ ಕಚ್ಚೆ ಉಟ್ಕೋ ಬ್ಯಾಡ
ಮಿನಿಸ್ಟ್ರಾಯ್ತಿಯ .

ಏಪ್ರಿ 28, 2010

ಮೊಬೈಲ್ ಮಡದಿ

ಮದುವೆ ಆಗಲಿಕ್ಕೆ ಹುಡುಗಿನ್ನ ನೋಡೋದಂದ್ರೆ ಮೊಬೈಲ್ ಖರೀದಿ ಮಾಡಿದಂಗೆ.

ಯಾವುದೇ ಡೀಲರ್ ಹತ್ರ ಹೋದರು , ಯಾವುದೇ ಬ್ರೋಕರ್ ಹತ್ರ ಹೋದ್ರೂ,
ಯಾವುದೇ
ಸೈಟು ಓಪನ್ ಮಾಡಿದ್ರು , ನೂರಾರು ತರಹದ ಬ್ರಾಂಡುಗಳು,
ಸಾವಿರಾರು ತರದ ಮಾಡೆಲ್ಲು.

ಸುತ್ತಾ ಮುತ್ತಾ ನೂರಾರಿದ್ರು ಅದರಲ್ಲೇನೋ ಖುಷಿಯಿಲ್ಲ ,
ನೂರಾರು
ಒಳ್ಳೆ ರಿವಿವ್ ಸಿಕ್ಕರು ನಮಗೆ ಅದು ಬೇಕಿಲ್ಲ.
ಎಂಥಾ ಒಳ್ಳೆ ಮೊಬೈಲ್ ಇದ್ರೂ ಸೆಕೆಂಡ್ ಹ್ಯಾಂಡು ನೋಡಲ್ಲ.


ನಮಗೆ ಅಂತ ಎಲ್ಲೋ ಒಂದು ಮೊಬೈಲ್ ಮನುಫಾಕ್ಟುರ್ ಆಗಿದೆ ,
ಯಾವುದೋ ಅಂಗಡಿ ಮೂಲೆನಲ್ಲಿ ನನ್ ಸಲುವಾಗಿ ಕಾದಿದೆ

ಅದನ್ನ
ಹುಡುಕೋ ತಯಾರಿ ಈಗ ಜೋರಾಗಿ ನಡೆದಿದೆ.


ಅಕ್ಕ ಪಕ್ಕ ದವರ ಮೊಬೈಲ್ ನೋಡಿ
requirement ಸೆಟ್ಟು ಆಯ್ತು,ನೂರಾರು ರಗಳೆ ಕೇಳಿದ ಮೇಲೆ
ಬೇಸಿಕ್ ಮಾಡೆಲ್ ಸಾಕು ಅನಿಸ್ತು.

ಬೇಸಿಕ್ ಮಾಡೆಲ್ಲು ಬೇಕು ಅಂತ ಕೇಳಿದ್ರೆ ಮಾರ್ಕೆಟಲ್ಲಿ,
ಔಟ್ ಆಫ್ ಸ್ಟಾಕ್ ಬೋರ್ಡು ಎಲ್ಲ ಅಂಗಡಿ ಬಾಗಿಲಲ್ಲಿ .
out dated ಅಂತ ಜೋಕು ಬೇರೆ , ಕೇಳಿದವರ ಬಾಯಲ್ಲಿ


ಎಲ್ರು ಬಾಯಲ್ಲಿ ಬಂದಿದ್ದು ಆಗ ಒಂದೇ ಒಂದು ಮಾತು
ಬೇಸಿಕ್ ಮಾಡೆಲ್
ಮನುಫಾಕ್ಟುರಿಂಗ್ ಈಗ ಆಗ್ಲೇ ನಿಂತಾಯ್ತು ,
ಏನಿದ್ದರು ಈಗ ಓನ್ಲಿ ಸ್ಲೀಕ್ , ತ್ರೀಜಿ ಅಂಡ್ ಬ್ಲೂಟೂತು

ಆಯ್ತು ತೋರ್ಸಿ ಯಾವುದಿದೆ ನೋಡೋಣ ಅಂತ ಅಂದೆ
ದೇವರ
ಮೇಲೆ ಭಾರ ಹಾಕಿ , ಮನಸು ಗಟ್ಟಿ ಮಾಡ್ಕೊಂಡೆ.
ಬಂದಿದ್ ಬರಲಿ ಅಂತ ಸ್ವಲ್ಪ ದೈರ್ಯ ನಾನು ತಂದ್ಕೊಂಡೆ

ಅಲ್ಲೇ
ಷೋಕೇಸಲ್ಲಿ , ಐಫೋನ್ , ಬ್ಲಾಕ್ ಬೆರಿ ಕಾಣ್ತಿತ್ತು ,
ಅದೆಲ್ಲ ಕತ್ರೀನ , ಕರೀನಾ ತರಹ
high cost and mainatainansu

ಬಜೆಟಲ್ಲಿಲ್ಲ ಬ್ಯಾಡ ಗುರು
ಸ್ಮಾರ್ಟ್ ಫೋನ್ ಗಳ ಸಹವಾಸ
ಅವುಗಳ ತಂಟೆಗೆ ಹೋದರೆ ದಿನಾ ನಮಗೆ ಉಪವಾಸ

ಮಿಡ್ಲ್ ಕ್ಲಾಸ್ ರೇಂಜ್ ಮೊಬೈಲ್ ,case ನಿಂದ ಹೊರಗ ಬಂತು.
ಡಿಸ್ ಪ್ಲೇ ತುಂಬಾ ದೊಡ್ದದಾಗಿದ್ರೆ , ಕೀ ಪ್ಯಾಡು ಚಿಕ್ಕದು.
ಕೀ ಪ್ಯಾಡು ದೊಡ್ದ್ದಾಗಿದ್ರೆ , ಡಿಸ್ ಪ್ಲೇ ತುಂಬಾ ಚಿಕ್ಕದು .

ಬ್ಯಾಟ
ರೀ ಬ್ಯಾಕಪ್ ಹೆಂಗೆ ಅಂತ ದೇವರಾಣೆ ಗೊತ್ತಿಲ್ಲ .
ಕಲರ್ , ಔಟ್ಲುಕ್ ಬಗ್ಗೆ ನಮಗೆ ಬಹಳ ಜಾಸ್ತಿ ಚಿಂತಿಲ್ಲ ,
ಕೆಟ್ಟದಾಗಿ ಕಾಣೋ ಮೊಬೈಲ್ ನಮಗೆ ಸುತಾರಾಂ ಬೇಕಿಲ್ಲ.


ಇದ್ದುದರಲ್ಲೇ ಸ್ವಲ್ಪ ಚೆನ್ನಾಗಿ , ಕ್ಯಾಮೆರಾ ಎಂಪಿತ್ರೀ ಪ್ಳಯೇರ್ ಬೇಕು
ಅಪ್ಪಿ ತಪ್ಪಿ ಹಳ್ಳಿಗೆ ಹೋದ್ರೂ ಸಿಗ್ನಲ್ ಸರಿಯಾಗಿ ಹಿಡಿಬೇಕು
ಜೊತೆಗೆ GSM ಸಿಮ್ಮು ಫ್ರೀ ಆಗಿ ಸಿಗಬೇಕು

ಮತ್ತೆ ಸ್ವಲ್ಪ ಸಿಂಪಲ್ಲಗಿ , ಗೇಮ್ಸ್ ಅದರಲ್ಲಿರಬೇಕು.
ಕ್ಯಾಲೆಂಡರು , ಕ್ಯಾಲ್ಕುಲೆಟ್ರು , ಅಲಾರ್ಮ್ ಕ್ಲಾಕು ಇದ್ರೆ ಸಾಕು.
ಟಚ್ ಸ್ಕ್ರೀನ್ , ಸ್ಲೀಕ್ ಮಾಡೆಲ್ ಯಾಕ್ ಬೇಕು ?


ಹಂಗತ ಚೈನಾ ಮಾಡೆಲ್ ಗೆ ನಂದು ನೋ preferensu
ಏನಿದ್ರು ಬೇಕು ನಮಗೆ ವೆರಿ well known brand ಸು
additional requirement is
ಗ್ಯಾರೆಂಟಿ and ಇನ್ಸುರೆನ್ಸು


ಎಲ್ಲಾದರು ಇದ್ದರೆ ನೋಡ್ರಿ ಅಣ್ಣ .
ಅಂಥಾ ಮೊಬೈಲ್ ಬೇಕಣ್ಣ







ಹೀಗಿಗೂ ಉಂಟೆ !!!!!!!!!!

ತಾತನ ಭೂತ ಅಮವಾಸೆ ದಿವಸ ಮನೆಗೆ ಹೋಗಿತ್ತು.
hall ಕುರ್ಚಿ ಮೇಲೆ ಆರಾಮಾಗಿ ಕುಳಿತಿತ್ತು .

ಆಗ ತಾನೇ ಎಲ್ಲರದು ಊಟ ಮುಗಿದಿತ್ತು .
ಎಂದಿನಂತೆ ಆವತ್ತೂನು ಟಿವಿ on ಇತ್ತು .

ಹೀಗೂ ಉಂಟೆ ಅಂತ program ಟಿವಿ ಲಿ ಶುರುವಾಯ್ತು .
FITS ರೋಗಿಯ ದೊಂಬರಾಟ ಅಜ್ಜಗೆ ಮುಳುವಾಯ್ತು .

ಟಿವಿಯಲ್ಲಿ ಕತ್ತಲೆ ನೋಡಿ ಮಗುವು ಹೆದರಿತ್ತು
ತಾತನ ತೊಡೆಯನ್ನೇರಿ ಅವನ ತಬ್ಬಿ ಕೊಂಡಿತ್ತು

ತಬ್ಬಿಬ್ಬಾದ ತಾತನು ಆಗ ಮಗುವನು ರಮಿಸಿದ್ದ
ಅವನು ಮನುಷ್ಯ, ಮಗುವೆ ನಾನೇ ದೆವ್ವ ಅಂದಿದ್ದ .

ನಂಬದ ಕೂಸು ತಾತನ ಜುಟ್ಟು ಹಿಡಿದು ಏಳದಿತ್ತು
ಹೀಗೂ ಉಂಟೆ ,ಅಂತ Acting ಮಾಡಿ ತೋರ್ಸಿತ್ತು

ಪ್ರೊಗ್ರಾಮ್ ಮುಗಿಯೋ ಹೊತ್ತಿಗೆ ಭೂತ ಹೆದರಿತ್ತು
ಹೀಗೂ ಉಂಟೆ ಅಂತ ಹೇಳ್ತಾ ಎದ್ದು ಹೋಗಿತ್ತು






ಏಪ್ರಿ 27, 2010

ದೇವರು ಬೇಕಾ ದೇವರು

ಇಲ್ಲ ಸಲ್ಲದ ಕೆಲಸವ ಮಾಡಿ
ಕಳ್ಳ ಹಣವನು ಕೂಡಿಡುವೆ

ಪಾಪ ಪ್ರಜ್ಞೆಯು ಕಾಡಲು ನಿನ್ನ
ದೇವಗೆ ಲಂಚ ನೀ ಕೊಡುವೆ

ತಿರುಪತಿ ಹುಂಡಿ ತುಂಬಿದ ಮೇಲು
ನಿನ್ನ ಪಾಪದ ಹೊರೆ ಮೇಲು

ದೇವರ ಹುಡುಕುತ
ಲಂಚವನೀಯಲು ಕಾತರದಿಂದ ಹೊರಟಿರುವೆ

ಪಾಪದ ಹಣವನು ಪಡೆದ ತಪ್ಪಿಗೆ
ದೇವರು ತಾನೂ ನೊಂದಿರುವ

ಅದಕ್ಕೆ ನೋಡೋ ಮಗನೆ ಈಗ
ಬಿಡದಿ ಭೂಪ ಹುಟ್ಟಿರುವ

ಕಾಗೆ (ನಮ್ಮ ನಾಯಕರು)

ಕಾಗೆಯ ಗುಂಪಿಗೆ ಕಾಕನ ಹಾಡೇ ಇಂಪಾಗಿಹುದು ಕೇಳಣ್ಣ
ಕೋಗಿಲೆ ದನಿಯನು ಕೇಳಿದ ಒಡನೆಯೆ
ರೊಚ್ಚಿಗೆಳುವ ಕಾಗಣ್ಣ.

ಕಾವ್ ಕಾವ್ ಅಂದ ಕೂಡಲೇ
ಬಂದು ಸೇರುವ ಹಿಂಡಣ್ಣ, ಎಲ್ಲರು ಹಾಡುವ ಬಾಯೇ ಅಲ್ಲಿ
ಕೇಳುವ ಕಿವಿಯು ಇಲ್ಲಣ್ಣ.

ಚಿತ್ರೋದ್ದ್ಯಮ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ತೆಲುಗು ತಮಿಳಿನ ಕತೆಗಳ ತಂದು ಸ್ವಂತಿಕೆಯನ್ನ ಕೊಲ್ತಿರ್ರಿ
ಥೇಟರ್ ಖಾಲಿ ಹೊಡೆದರೆ ನೀವು ಕುಯ್ ಕುಯ್ ರಾಗ ಹಾಡ್ತಿರ್ರಿ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ಒಂದು ಮಳೆ ಹಿಟ್ ಆದರೆ ಬರೀ ಮಳೆ ತರ್ತಿರ್ರಿ
ಮಳೆಗೆ ಬಂಡವಾಳ ಕೊಚ್ಗಂಡು ಹೋದರೆ ಕುಯ್ ಕುಯ್ ರಾಗ ಹಾಡ್ತಿರ್ರಿ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ತವರು,ತಂಗಿ,ಕರುಳು,ಮಚ್ಚು ಎಲ್ಲ ಅತಿಯಾಗಿ ಕುಯ್ತಿರ್ರಿ
ವಾಂತಿ ಭೇದಿ ಆಯ್ತು ಅಂತ , ಮನ್ಯಾಗ ಕುಂತ್ಕಂಡ್ ಅಳುತಿರ್ರಿ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ಹಣ ಇರುವ ಹೆಣವನು ತಂದು ಇವನೇ ಹೀರೋ ಅಂತಿರ್ರಿ
ಜನ ಥೇಟರ್ಗೆ ಹೋಗ್ಲಿಲ್ಲಂತ ಕುಯ್ ಕುಯ್ ರಾಗ ಹಾಡ್ತಿರ್ರಿ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ಹೀರೋಯಿನ್ ಮಾಡ್ತಿನಂತ ಹುಡ್ಗೀರ್ ಮಾನ ಕಳಿತಿರ್ರಿ
ಮರ್ಯಾದಸ್ತರು ನೋಡ್ಲಿಲ್ಲಂತ ಕುಯ್ ಕುಯ್ ರಾಗ ಹಾಡ್ತಿರ್ರಿ

ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ನಿಮ್ಮ ಚಟಕ್ಕೆ ನೀವೇನೋ ಮಾಡಿ ಭಾಷೆನ್ಯಾಕೆ ಕೊಲ್ತಿರ್ರಿ
ಭಾಷೆ ಕೊಲ್ಲೋರ್ಗೆಲ್ಲ ಯಾಕೆ ಸಬ್ಸಿಡಿ ಕೊಡಬೇಕ್ರಿ

ಏಪ್ರಿ 21, 2010

ಬೆಂಗಳೂರೆಂಬ ಅನಿವಾರ್ಯ ಮೋಹಿನಿ

ಬೆಂಗಳೂರಿನಲ್ಲಿ , ಬೆಳಕಾದರೆ ಆ ಹೊಸೂರು ರೋಡ್ ನಲ್ಲಿ ಟ್ರಾಫಿಕ್ ಜಾಮ್ , ೯:೦೦ ಗಂಟೆಗೆ ಮನೆಯಿಂದ ಹೊರಟರೆ ಆಫೀಸಿಗೆ ಹೋಗೋಕೆ ಹನ್ನೊಂದು ಗಂಟೆ , ಆ ಎರಡು ಗಂಟೆ ರೋಡಿನ ಮೇಲೆ ನರಕ , ನಿಲ್ಲಾಕೆ ಜಾಗ ಇಲ್ಲದೆ ಎಲ್ಲಂದರಲ್ಲಿ ನಿಲ್ಲೋ bmtc ಬಸ್ಸು , ಅದನ್ನ ಹತ್ತಾಕೆ ಅಂತ ಉಳಿದ ಯಾವುದೇ ವಾಹನ ಕೇರ್ ಮಾಡದೆ ರೋಡಿನ ಮೇಲೆ ನುಗ್ಗೋ ಜನ , ಅವರ ಮದ್ಯದಲ್ಲಿ two ವ್ಹೀಲರ್ ಗಳನ್ನ ನುಗ್ಗಿಸಿಕೊಂಡು , ತಮ್ಮ ಜೀವಕ್ಕೂ ಅಪಾಯ ತಂದ್ಕೊಂದು , ಇನ್ನೋಬರ್ರಿಗೂ ಅದೃಷ್ಟ ಪರೀಕ್ಷೆ ಮಾಡಿ , ಅದರ ಭರವಸೆ ಯಲ್ಲಿ ಬದುಕೋ ಅವಸರದ ಜನ , ಸಾಲದು ಅಂದ್ರೆ ಟ್ರಾಫಿಕ್ ನಲ್ಲಿ ನಿಂತಾಗ ವಜ್ರ ನ ತಿಕದಿಂದ ಮುಖಕ್ಕೆ ರಾಚೋ ಬಿಸಿ ಗಾಳಿ . footpaath ಮೇಲು ನಮ್ಮ rider ಗಳದ್ದೇ ದರ್ಬಾರು, ಇದು ಸಾಲದು ಅಂತ , ಪ್ರೈವೇಟ್ vehical's ಬೇರೆ , ನೆಸೀಬು ತೀರ ಕೆಟ್ಟದಾಗಿದ್ರೆ ಅದ್ರಾಗಿಂದ ಬಾರೋ ತೆಲಗು ತಮಿಳ್ ಸಿನಿಮಾ ಡೈಲಾಗು ಕೂಡ ಸುಪ್ರಭಾತ .

ಅಸ್ಟಾಯ್ತು ಅಂತೀರಾ , ಹಾಗೋ ಹೀಗೋ ಆಫಿಸಿಗೆ ಬಂದ ಮೇಲೆ , ಕೆಲಸ ಮಾಡಿ ಮಧ್ಯ್ಯಾಹ್ನ ಊಟ ಮಾಡೋಣ ಅಂದ್ರೆ , ಹಿಗ್ಗಾ , ಮುಗ್ಗಾ ದುಡ್ಡು ಇಸ್ಕಂಡು ಕ್ಯಾಂಟೀನ್ ನಲ್ಲಿ ಕೊಡೊ ಆರಿದ ರೈಸ್ ಬೇಡ ಅಂದ್ರೆ ಸಿಕ್ಕೋದು ಸಮೋಸ ಮತ್ತೆ ಬರ್ಗರ್ ಇದು ಬೇಡ ಅಂದ್ರೆ ಮುಂಜಾನೆ ನೋಡಿದ ನರಕವನ್ನ ಮಧ್ಯಾಹ್ನ ಕೂಡ ನೋಡ್ಬೇಕು. ಊಟದ ಸಹವಾಸ ಬೇಡ ಅನ್ನಿಸಿಬಿಡುತ್ತೆ .

ಮತ್ತೆ ರಾತ್ರಿ ಮನೆಗೆ ಹೋಗಬೇಕಾದ್ರೆ ಆಟೋ ದವರ ಸುಲಿಗೆ , ಮಾತಾಡಿದರೆ ಮೀಟರ್ ಮೇಲೆ , ಮೀಟರ್ನ ಸ್ಪೀಡು ಆಟೋ ಕ್ಕಿಂತ ಜೋರು . ಬಸ್ಸಿಗೆ ಹೋಗೋಣ ಅಂದ್ರೆ , ಅವು ತುಂಬಿ ತುಳುಕ್ಥಾ ಇರ್ತವೆ . ಇದೆಲ್ಲದರ ಮಧ್ಯ ಮನೆಗೆ ತರಕಾರಿ ಖರೀದಿ , ಸ್ಕೂಲ್ ಗೆ ಹೋಗಿರೋ ಮಕ್ಕಳ ಚಿಂತೆ , ಖಾಯಿಲೆ ಬಿದ್ದರೆ ಸುಲಿಯೋ ಹೈಟೆಕ್ ಆಸ್ಪತ್ರೆ , ಜೊತೆಗೆ ಇರುವ ಮನೆ ದೋಸೆಯ ತೂತು ಗಳು
ಈ ಪುಣ್ಯಕ್ಕೆ ಸಿಕ್ಕಿರುವುದು ಬೆಂಗಳೂರು ಎಂಬ ಮಾಯಾಂಗನೆಯ ಸಹವಾಸ

ಬೆಂಗಳೂರಿನ ನೆಮ್ಮದಿ ದೇವರಿಗೆ ಪ್ರೀತಿ . ನಮ್ಮೂರಲ್ಲಿ ನಮಗೆ ಅನ್ನದ ಋಣವಿರದೆ ಇಲ್ಲಿಗೆ ಬಂದಿರುವ ಪಾಪಾತ್ಮವೇನೋ ಎಂಬ ಚಿಂತೆ .
ಏನ್ಮಾಡೋದು ಇವಳ ಸೆರಗು ಬಿಟ್ಟರೆ ಕಷ್ಟವೇ ಜಾಸ್ತಿ . ಇರೋ ಬರೋ ಅವಕಾಶಗಳೆಲ್ಲ ಇವಳ ಮಡಿಲಲ್ಲೇ ಇದೆ . ಬೆಂಗಳುರನ್ನ ಬೆಳಸುತ್ತಿರುವ ಜನ ಈ ಸುಂದರಿಯ , ಸೌಂದರ್ಯ ವನ್ನ , ಇಲ್ಲಿರುವ ಒಳ್ಳೆ ವಾತಾವರಣವನ್ನ ಲೂಟಿ ಹೊಡೆದು ಬರಿದು ಮಾಡುತ್ತಿದ್ದಾರೆ .

ದೇವರೇ ನನಗೆ ದಾರಿ ತೋರಿಸು , "ವರ್ಕ್ ಫ್ರಂ ಹೋಂ " ಅನ್ನೋ ತಂತ್ರ ಬೆಂಗಳುರಿಗೂ ತರಿಸು

ಯಾರು ನಿನ್ನ ಹೀರೋ

ಗೌಡ ನಾಟಕದವರಿಗೆ ಹಣ ಕೊಟ್ಟು ಊರೊಳಗೆ ನಾಟಕ ಆಡಿಸೋದು ಯಾಕೆ ?
ಬಯಲಾಟದ ಪಾತ್ರಧಾರಿ ಮೇಸ್ಟ್ರಿಗೆ ಹಣ ಕೊಟ್ಟು ಕುಣಿಯೋದು ಯಾಕೆ ?
ದಸರಾದಲ್ಲಿ ಮಹಾರಾಜ ಕುಸ್ತಿ ಆಡಿಸಿದ್ದು ಯಾಕೆ ?

ಅದೆಲ್ಲ ಕೇವಲ ಮನೋರಂಜನೆ ಮಾತ್ರ. ದಣಿದ ಮನಕೆ ಉಲ್ಲಾಸ ನೀಡಲು ಹುಟ್ಟಿದ ಹವ್ಯಾಸಗಳು ಅವು. ಹವ್ಯಾಸಗಳನ್ನುಬದುಕಾಗಿಸಿಕೊಂಡ ಕಲಾವಿದರು ವೃತ್ತಿಪರ entertainers.
ಅವರಿಗೆಲ್ಲ ವಿಷಯ ಚೆನ್ನಾಗಿ ಗೊತ್ತಿತ್ತು. ಮತ್ತು ಜನ ಕೂಡ ಸತ್ಯವನ್ನು ಅರಿತುಕೊಂಡಿದ್ದರು.

ಜನ ಆಗ ಮುಗ್ಧರಾಗಿದ್ದರು ,ಮೂಡರಲ್ಲ. ಅವರು ಮನೋರಂಜನೆಯನ್ನ ಬದುಕಿನ ಭಾಗವಾಗಿ ನೋಡಿದರು, ಅದಕಾಗಿಬದುಕನ್ನೇ ಮರೆಯಲಿಲ್ಲ.

ಈಗ ಏನಾಗಿದೆ ?

ಜನರಲ್ಲಿ ಅಭಿವೃದ್ದಿಯ ಜೊತೆಗೆ ಬೌದ್ದಿಕ ಬಡತನ ಬಂದಿದೆ.
ಸಿನೆಮಾ ನೋಡಿ ನೋಡಿ ದಣಿಯುವುದು, ಕ್ರಿಕೆಟ್ ನೋಡಿ ನೋಡಿ ದಣಿಯುವುದು ಬದುಕು ಮುಗಿಯೋ ಹೊತ್ತಿಗೆ ನಾನೇನುಮಾಡಿದೆ ಅಂತ ಕೇಳಿ ಸಾಯೋದು .

ಬ್ಲಾಕ್ ಮನಿ ಯನ್ನು ವೈಟ್ ಮಾಡಲು ಸುವರ್ಗಳನ್ನ ಹಾಕ್ಕೊಂಡು ಸಿನಿಮಾ ಮಾಡೋರು , ಹುಚ್ಚ ಮುಂಡೆ ಮದ್ವ್ಯಗೆ ಉಂಡಲೆಕ್ಕದಾಗೆ ಆಡಿ ಬುಕ್ಕಿ ಗಳ ಸೆಗಣಿ ತಿನ್ನೋರು, ಇವರೆಲ್ಲರ ಹಿಂದೆ ಹೋಗೋ ಮೂಡ ಜನ , ಇವರೆಲ್ಲರಿಗಿಂತಲೂ ಹೆಚ್ಚಾಗಿ ಜನಸಾಮಾನ್ಯರನ್ನ ಖದಿಮರ ಸೆಳೆತಕ್ಕೆ ಸಿಲುಕಿಸಿ pimp ಗಳಂತೆ ಕೆಲಸ ಮಾಡುತ್ತಿರುವ ಮಾಧ್ಯಮದವರು ಇರುವವರೆಗೆ

ಯಾರು ನಿನ್ನ ಹೀರೋ ಹೇಳೋ ಮಗು ??

ಬೆಳಗುವ ಮುನ್ನ ಉರಿಯುತ್ತಿರುವೆ

ಎಲ್ಲರ ಕನಸ ಕೊಂದು ಅಳುತಿರುವೆ ಯಾಕೆ ಮರುಳೆ
ಕಟುಕ ಮರುಕ ಪಡುವಂತಹ ಬದುಕ ಹಂಚಿದವ
ಳೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಬದುಕಿಗೆ ಹೊಣೆ ಯಾರ್ಯಾರೋ ಆದರೆ
ನೀ ಬದುಕುವುದು ಯಾಕೆ ಹೇಳೇ
ಸ್ವಂತಿಕೆ ಮರೆತ ಹೆಣ್ಣಿಗೆ ,ಸಿಹಿ ಕಳೆದುಕೊಂಡ ಹಣ್ಣಿಗೆ ವ್ಯತ್ಯಾಸ ಹೇಳೇ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಸುಖವನು ಹುಡುಕ ಹೋರಾಟ ಮೂರ್ಖರಿಗೆ ಸಿಕ್ಕ ಸುಖ ಗೊತ್ತೇ ?
ಅವರು ಮೂರ್ಖರು ಎಂಬ ಸತ್ಯದ ಅರಿವು
ಅದಾದರೂ ಸಿಗಬಹುದು ನಿನಗೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ

ಈ ಬ್ಲಾಗ್ ಅನ್ನು ಹುಡುಕಿ