ಮೇ 30, 2010

ದೊಂಬರು ಬಂದರು ದೊಂಬರು

ನಿನ್ನೆ ಬಂಗಾರಿ ೨೪ * ೭ ನ್ಯೂಸ್ ಚಾನೆಲ್ಲಿನ ಎಕ್ಷ್ಕ್ಲುಸಿವ್ ನ್ಯೂಸ್ ಏನಪ್ಪಾ ಅಂದ್ರೆ , ಅಲ್ಲಿ ದುರ್ಗದಲ್ಲಿ ಯಾವನೋ ಕುಡುದು ಮರ ಹತ್ತಿದ್ದನಂತೆ , ಸುಮಾರು ಹೊತ್ತು ಕಷ್ಟ ಪಟ್ಟು ಜನ ಅವನನ್ನ ಕೆಳಗೆ ಇಳ್ಸಿದ್ರಂತೆ, ಸ್ವಲ್ಪ ಹೊತ್ತಾದ ಮೇಲೆ ಅವನು ನೀರಿನ ಟ್ಯಾಂಕ್ ಮೇಲೆ ಹೋಗಿ ಕೂತ್ಕಂಡ್ನಂತೆ, ಅವನನ್ನ ಪೊಲೀಸರು ಜನಗಳು ಕಷ್ಟ ಪಟ್ಟು , ಹರ ಸಾಹಸ ಮಾಡಿ ಕೆಳಗೆ ಇಳಿಸಿದರಂತೆ .

ಅಲಾಲಲ ಸಿಂಗ್ರಿ, ಅವನ ಜೊತೆಗೆ ನೀನು ಕೂತ್ಕಂಡು ಪೆಗ್ಗ್ ಹಾಕಿತಿದ್ದ್ಯ ಮಗಾ , ಅದ್ಯಾವ ಸೀಮೆ ಕಳ್ಳಬಟ್ಟಿಸಾರಾಯಿ ಕುಡಿದಿಯೋ, ನಿನ್ನ ಗೆಳೆಯ ಗಿಡ ಹತ್ತಿದ್ದು ಕ್ಯಾಮೆರದಾಗ ಹಿಡ್ಕೊಂಡು ದೊಡ್ಡ ನ್ಯೂಸ್ ಅನ್ನಂಗೆ ತೋರಿಸಿ ಬಿಟ್ಟೆ , ಅಲಾಲ ಸಿಂಗ್ರಿ , ನಿಮ್ಮು ರೀಡರ್ ಪ್ರಶ್ನೆ ಮೇಲೆ ಪ್ರಶ್ನೆ , ಇದು ಎಸ್ತೋತ್ತಿಗಾಯ್ತು , ಎಂಗಾಯ್ತು , ಜನ ಎನ್ಮಾಡ್ತಿದ್ದರೆ ಕೇಳಿದ್ದೆ , ಕೇಳಿದ್ದು .... ಸಿಂಗ್ರಿ .. ಸಿಂಗ್ರಿ ಕಿಸ್ಕಂಡು,ಕಿಸ್ಕಂಡು ಹೇಳಿದ್ದೆ .. ಹೇಳಿದ್ದು

ಸಿಂಗ್ರಿ ಕಡಿಮೆ ಕುಡಿ ಕಣ್ಲಾ, ನೀರಿನ ಟ್ಯಾಂಕ್ ಹತ್ತಿದರೆ ಕೆಳಗೆ ಇಳಸಬಹುದು, ನ್ಯೂಸ್ ನ ಚಟ್ಟ ಹತ್ತಿಸ್ದ್ರೆ ಇಳ್ಸಾಕಾಗಕಿಲ್ಲ . ಸುವರ್ಣ ಅಂದ್ರೆ ಬಂಗಾರ ಕಣ್ಲಾ , ಸುವರ್ naa ಅಂತ ಅಲ್ಲ ...

ಮೇ 28, 2010

ಮತ್ತು, ಮತ್ತು, ಮತ್ತು ಗಮ್ಮತ್ತು

ಎದೆಯ ಬಡಿತ ನಿಲ್ಲುವುದನೆ
ಕಾಯುತಿರುವ ಮಿದುಳ ಮಿಡಿತ
ಹೃದಯವನ್ನ ಬಗೆಯುತಿರುವ, ಚಿಂತೆ ಕೊರೆತ
ಮೀರಿ ನಿಂತು ಮೆಟ್ಟಿಬಿಡುವುದು ,
ಮದಿರೆ ನಿನ್ನ ಹೀರುವ ತವಕ

ಗತ್ತಿನಲ್ಲಿ ಹೀರುವಾಗ , ಮತ್ತಿನಲ್ಲಿ ತೇಲುವಾಗ
ಯಾವ ಖುಶಿಯು ಸಾಟಿ ಹೇಳು ನೋವೆ ಮರೆತು ಹೋಗುವಾಗ
ನಿನ್ನ ರುಚಿಯ ಸವಿಯಲಿಕ್ಕೆ ಬೇಕು ಮನಕೆ ಬೇಸಿಗೆ
ಅರ್ಥವಾಗದು ಎಂದಿಗೂ ಕಹಿಯ ಸವಿಯು ಜಿಹ್ವೆಗೆ

ಮದಿರೆ ನಿನ್ನ ಮುತ್ತಿಗೆ , ನೀ ಕೊಡುವ ಮತ್ತಿಗೆ
ಗಮ್ಮತು , ಆಹ್ಲಾದ ಇಂದೇ ನನ್ನ ಬುಟ್ಟಿಗೆ
ನೀನೊಬ್ಬಳೆ ಸುಂದರಿ , ಆಗಬೇಡ ತಾಟಕಿ
ತೇಲಬೇಕು ನಾನು ಈಗ , ತೆವಳಲಾರೆ ನರ್ತಕಿ







ಕಿಮ್ಮತ್ತು

ಕತ್ತಲೆ ಇರದೆ ಬೆಳಕಿಗೆ ಏನಿದೆ ಕಿಮ್ಮತ್ತು ?
ಹಸಿವೆಯು ಇರದೆ ಅನ್ನಕೆ ಏನಿದೆ ಕಿಮ್ಮತ್ತು ?

ಸೋಲೇ ಇಲ್ಲದೆ ಗೆಲುವಿಗೆ ಏನಿದೆ ಕಿಮ್ಮತ್ತು ?
ದುಃಖವು ಇರದೆ ಸಂತಸ ಕ್ಕೆನಿದೆ ಕಿಮ್ಮತ್ತು ?

ಸಾವೇ ಇರದೆ ಬದುಕಿಗೆ ಏನಿದೆ ಕಿಮ್ಮತ್ತು ?


ಕತ್ತಲೆಯಿಂದ ಬೆಳಕಿನೆಡೆಗೆ
ಬೆಳಕಿನಿಂದ ಕತ್ತಲೆಯೆಡೆಗೆ

ಹಸಿವಿನಿಂದ ಅನ್ನದೆಡೆಗೆ
ಅನ್ನದಿಂದ ಹಸಿವಿನೆಡೆಗೆ

ದುಃಖದಿಂದ ಸಂತಸದೆಡೆಗೆ
ಸಂತಸದಿಂದ ದುಃಖದೆಡೆಗೆ

ವಿಧಿ ನಡೆಸುವ ದಾರಿಯ ಗುರುತು ಗೊತ್ತಾಗುವುದು ಎಲ್ಲರಿಗೂ
ಸಾವು - ಬದುಕಿನ ಪಯಣದ ಹಾದಿ ತಿಳಿದೇ ಇಲ್ಲ ಯಾರಿಗೂ

ಮೇ 6, 2010

24 X 7 ನ್ಯೂಸ್ ಚಾನೆಲ್ಲುಗಳ ದೊಂಬರಾಟ

ಬೇಡಲು ಬರ್ತಿದ್ದ ದೊಂಬರಿಗೆ ಬರುತ್ತಿದ್ದದ್ದು ಒಂದೇ ಒಂದು ನಾಟಕ , ಅದು ಶ್ರೀ ರಾಮಾಯಣ.
ಮುಖಕ್ಕೆ ನೀಲಿ ಬಣ್ಣ ಹಾಕಿಕೊಂಡ ರಾಮ , ಬಾಲವಿದ್ದ ಹನುಮಂತ ,ಸೀತೆ.
ಒಂದು ಹಾರ್ಮೋನಿಯಂ ಮತ್ತು ರಾಮನ ಅವತಾರ , ರಘುಕುಲ ಸೋಮನ ಅವತಾರ ಹಾಡಿನ ಒಂದು ಪ್ಯಾರ ಇಷ್ಟರಲ್ಲೆ  ದೊಂಬರ ಬದುಕು.

ಅದೇ ಹಾಡನ್ನ ಊರಿನ ಮನೆ ಮನೆಗೂ ಹೋಗಿ , ಹಾಡುತ್ತಿದ್ದ ದೊಂಬರು ಬೇಡಲು ಬರುತ್ತಿದ್ದದ್ದು ವರ್ಷಕ್ಕೆ ಒಂದೇ ಸಾರಿ , ಹಾಗಾಗಿಅದೇ ಹಾಡು ಯಾರಿಗೂ ಬೇಸರ ತರುತ್ತಿರಲ್ಲಿಲ್ಲ , ಊರೂರು ತಿರುಗಿ ಬದುಕುತ್ತಿದ್ದ ದೊಂಬರಿಗೆ  ಎರಡನೇ ಹಾಡಿನ ಅವಶ್ಯಕತೆಇರಲ್ಲಿಲ್ಲ .
ಇತ್ತೀಚಿಗೆ ಬಹುಶಃ
ದೊಂಬರು ಕೂಡ ಬದುಕಲು ಬೇರೆ ಮಾರ್ಗಗಳನ್ನ ಹುಡುಕಿಕೊಂಡಿದ್ದಾರೆ.

ಈಗ ಹೊಸ ತರಹದ ದೊಂಬರು ಬಂದಿದ್ದಾರೆ . ಸಾಮಾಜಿಕ ಜವಾಬ್ದಾರಿ ಇದೆ ಎಂದು ಬೀಗುವ , ಸಾಕಷ್ಟು ಶಕ್ತಿವಂತರಾಗಿರುವ,ಎಲ್ಲರ ಮನೆಯಲ್ಲೂ ಒಂದೇ ಸಾರಿ ಹಾಡಬಲ್ಲ , ಸಾಕಷ್ಟು ವಿದ್ಯಾವಂತರಾಗಿರುವ , ವಿಚಾರವಂತರೆಂಬ ಹುಸಿ ನಂಬಿಕೆಯ ಮೂಡ ಜನ. ಯಾರು ಗೊತ್ತಾಯ್ತ 24 X 7 ನ್ಯೂಸ್ ಚಾನೆಲ್ಲುಗಳು , ಹಾಡಿದ್ದೆ ಹಾಡೋ ಕಿಸಬಾಯಿ ದಾಸರು .

ದುರಂತ ಅಂದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ
ದೊಂಬರು ಇವರು .

ಇತ್ತೀಚಿಗೆ breaking news ಅಂತ ಇವರು ತೋರಿಸಿದ headline gotta ?
karnataka rape case CID to probe ಇದು ನ್ಯಾಷನಲ್ ಲೆವೆಲ್ ದೊಂಬರ ಕತೆ .
ಏನಪ್ಪಾ ಕರ್ನಾಟಕ rape ಅಂದ್ರೆ ?, ರಾಮಾಯಣದ ಹಾಡು ದೊಂಬರು ತಪ್ಪು ಹಾಡಿದರೆ ಪರವಾಗಿಲ್ಲ , ಈ ವಿದ್ಯಾವಂತರು ಹೇಳೋ ಸ್ಪಷ್ಟತೆ ಹೇಗಿದೆ ನೋಡಿ ?

ಇಪ್ಪತ್ನಾಲಕ್ಕು ಗಂಟೆ ಸಮಾಚಾರ ಹೇಳ್ತಿವಿ ಅಂತ ಬೊಗಳೆ ಬಿಡೋ ಇವರತ್ರ ಇರೋ ಸಮಾಚಾರದ ಯೋಗ್ಯತೆ ಏನು ಅಂತ , ಇವ್ರು ಪದೇ ಪದೇ ತೋರಿಸೋ ವೀಡಿಯೊ ಕ್ಲಿಪ್ಪುಗಳು , ಸಿನಿಮ ನಟರ ಸುದ್ದಿ ಹೇಳೋವಾಗ ಬರುವ ಮಾದಕ ದೃಶ್ಯಾವಳಿ , ಅಷ್ಟೇ ಯಾಕೆ ಮೊನ್ನೆ ಸಾನಿಯಾ ಮದುವೆ ಟೈಮಲ್ಲಿ ಇವರು ತೋರಿಸಿದ ಅವಳ ಅರೆ ಬಟ್ಟೆ ಫೋಟೋ ಗಳು ಸಾರಿ ,ಸಾರಿ ಹೇಳುತ್ತವೆ.

ಇವರು ಸಮಾಚಾರದ ಹೆಸರಲ್ಲಿ ಮಾರುತ್ತಿರುವುದು 24 X 7 ಮಸಾಲ . ಇತ್ತೀಚಿಗೆ ಈ ಸಾಮಾಜಿಕ ಕಳಕಳಿಯ ಕಳ್ಳರು ಸರ್ಕಾರದ ಭವಿಷ್ಯವನ್ನು ಕೇಳಲಿಕ್ಕೆ ಶುರು ಮಾಡಿದ್ದಾರೆ. ಮಂತ್ರಿಗಳಾಡೋ ಜಗಳಕ್ಕೆ , ಸರ್ಕಾರದ ಗ್ರಹ ಗತಿ ಕಾರಣ , ಕರ್ನಾಟಕ ದ ಜನ ಇನ್ನ ಕುಂಡಲಿ , ಸಮಯ ನೋಡಿ ಓಟು ಹಾಕಬೇಕು. ವಿದ್ಯಾವಂತ , ಪ್ರಜ್ಞಾವಂತರು  ಜನಕ್ಕೆ ಸಮಾಚಾರದಲ್ಲಿ ತೋರಿಸಿತ್ತಿರುವುದು , ರಾಹು , ಕೇತು ಗಳ ಪೋಷಿಷನ್ನು .

ಛಿ , ಥೂ!! ,
ಛಿ , ಥೂ!!





ಮೇ 4, 2010

ಮಿನಿಸ್ಟ್ರಾಯ್ತಿಯ

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಆಸ್ಪತ್ರಿಗೆ ಹೋಗ್ತಾರೆ .
ನರಸಮ್ಮ ನ್ನ ನೋಡಾಕೆ .

ಮಿನಿಸ್ಟ್ರು ಮನೆಗೆ ಹೊಗಾಕಿಲ್ಲ .
ಅವ್ರೆನಿದ್ರು ಬೇರೆಯವರ ಮನಿಗೆ ಹೋಗ್ತಾರೆ .
ಅವ್ರಿಗೆ ಆರಾಮಿರಕಿಲ್ಲ .

ಟಿವಿ ದೊರು ಕಮ್ಮಿ ಇಲ್ಲ .
ಮಿನಿಸ್ಟ್ರ ಮನಿಗೆ ಹೋಗ್ತಾರೆ .
ಮಿನಿಸ್ಟ್ರು ಮನಿಗೆ ಹೊಗಾಕಿಲ್ಲ .


ಇದೇನು ಬಂತೋ ಗ್ರಹಚಾರ
ಯಾರು ಎಲ್ಲಿ ಹೋದರು
ಮೊಬೈಲ್ ಕ್ಯಾಮರ ಬಿಡಾಕಿಲ್ಲ .

ಕ್ಯಾಮರದಾಗ ಎಲ್ಲರು
ಉಮೇಶ್ ರೆಡ್ಡಿ ಪಡಿಯಚ್ಚು .
ಅದ್ರೂನು ರಾಮನೇ ಎಲ್ಲರಿಗು ಅಚ್ಚು ಮೆಚ್ಚು .

ಟಿವಿದೊರು ಕಮ್ಮಿ ಇಲ್ಲ .
ಅವ್ರ ಸುದ್ದಿ ಬರಂಗಿಲ್ಲ .
ಕೇಸು ಮುಗಿದ ಮೇಲೆ ಕಳದ ಮಾನ ಕೊಡಂಗಿಲ್ಲ .

ಕೋಡಂಗಿ ಮಾರ ಕಚ್ಚೆ ಉಟ್ಕೋ ಬ್ಯಾಡ
ಮಿನಿಸ್ಟ್ರಾಯ್ತಿಯ .

ಈ ಬ್ಲಾಗ್ ಅನ್ನು ಹುಡುಕಿ