ಮೇ 15, 2008

ಅರಮನೆ

ಇವತ್ತು ದಿವಾಕರ್ ನ ಮದುವೆಗೆ ನಾನು ಆತ್ಮ ಮತ್ತೆ ರಾಖಿ ಹೊಗಿದ್ವಿ. ಗೋಪಿ,ರವಿ,ಸೂರಿ,ಸತ್ಯ,ಇಮ್ತಿ,ಜಯ,ಸಿದ್ದ ಎಲ್ಲ ಬಂದಿದ್ರು.
ತರ್ಲೆ ಮಾಡ್ತಾ ಶ್ರೀಮಂತ ಮದುವೆಯ ಭಾರೀ ಭೋಜನ ಕಂಟ ಪೂರ್ತಿ ಇಳಿಸಿ ಸಿನೆಮಾ ನೋಡೊಕೆ ಫ಼ೋರಂಗೆ ಬಂದ್ವಿ.

ನಾನು,ವೇಣು,ಆತ್ಮ,ರಾಕಿ ಸಿನೆಮಾ ಕ್ಕೆ ಮಿಕ್ಕಿದೋರು ಮನೆಗೆ :).
ವೇಣು ಇದ್ರೆ ನಮ್ಗೆಲ್ಲಾ ಕನ್ನಡ ಸಿನೆಮ ಖಾತ್ರಿ,ಪಾಪ ಚೆನ್ನೈಲಿ ಇರ್ತಾನೆ ಅಂತಾ ಯಾರು ತಕರಾರು ಮಾಡ್ದೆ ಕನ್ನಡ ಸಿನೆಮಾ ನೊಡೋಕೆ ಒಪ್ಪ್ಕೊತಿವಿ.

ಹಂಗಂತ ಕನ್ನಡ ಸಿನೆಮಾ ಕೆಟ್ಟದು ಅಂತೆನು ಇಲ್ಲ,ಎನೇ ಆದ್ರು, ಸಾಯಿ,ಪಾಂಡ್ಯನ್,ಥ್ರಿಲ್ಲರ್, ಸಾಲದ್ದಕ್ಕೆ ಗುಲ್ಜಾರ್,ಬಸಂತ್ ಕುಮಾರ್ನ ಸಹಿಸಿಕೊಂಡ ತಳಿ ನಮ್ದು.

ಈಗೀಗ ಮುಂಗಾರು ಮಳೆ ನಂತರ ಉಸಿರಾಡ್ಕೊಂಡು ಕನ್ನಡ ಸಿನೆಮಾ ನೋಡ ಬಹುದು, (ಆ ದಿನಗಳು ಬಾಕಿ ಇದೆ).

ಅರಮನೆಗೆ ಹೋದ್ವಿ, ಶಂಕರ್ನಾಗ್ ರ ಅಣ್ಣ ಅನಂತು (ಯುವಕ), ಮತ್ತೆ ಗೊಲ್ದನ್ ಗಣೇಶ,ಸಿನೆಮಾ ಹಿಡಿಸ್ತು, ಮದ್ಯ ಸ್ವಲ್ಪ ಬೇಜಾರಾಗ್ತಿದೆ ಅನ್ನಿಸಿದರು ಆರೋಪ ಮಾಡೋಕೆ ಕೆಟ್ಟದ್ದು ಸಿನಿಮಾದಲ್ಲಿ ಇರ್ಲಿಲ್ಲ. ಖುಶಿಯಾಯ್ತು.

ಸಿನೆಮಾ ಮುಗಿಯೋ ಹೊತ್ತಿಗೆ ಕೊನೆ ಹಾಡಿಗೆ ನಗು ಬಂತು, ಪ್ಲೇ ಬ್ಯಾಕ್ ಸಿಂಗರ್ ಗುರುಕಿರಣ್ ಓಕೆ, ಸ್ಟೇಜ್ ಮ್ಯಾಲೆ ಯಾಕೆ ?
ಲೂಸ್ ಮಾದ ಹೀರೋ ಆದ್ರೆ ನೀನ್ಯಾಕೆ ಆಗ್ಬಾರ್ದು, ಅದು ಆಗೆ ಬಿಡ್ಲಿ,

ನಾನು ನೋಡೊದಿಲ್ಲಪ್ಪ ರೂಡಿ ತಪ್ಪಿದೆ,ಸಹನೆ ಮೊದ್ಲಿನಂತೆ ಇಲ್ಲ.!!!!!

ಗಣೇಶ ತುಂಬಾ ಖುಶಿ ಕೊಟ್ಟ, ನಾಯಕಿಯ ತಂಗಿ ನಾಳೆಯ ನಾಯಕಿ ಅಂತ ನಾವೆಲ್ಲ ಪಿಟ್ಲು ಹಾಕಿದ್ದು ಆಯ್ತು.

ಆಮೆಲೆ ಒಂದು ಸಣ್ಣ ಅನುಮಾನ ಬಂತು, ಕಲ್ಲಿಗೆ ಸಂಕಟ ಬಂದ್ರೆ ಏನು ಮಾಡುತ್ತೆ ಅಂತ?, ಅರಮನೆ ಗಣೆಶನ್ನ ನೆನಸಿಕೊಂಡು ಸುಮ್ಮನಾಗುತ್ತೆ.

ಇಂತಿ ಒಂದು ಗುರುವಾರಕ್ಕೆ ಅವಾಂತರಗಳ ಸಮೇತ ಮಂಗಳ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ