ಮಾರ್ಚ್ 17, 2008

ನನ್ನ ಸಣ್ಣ ಕವಿತೆಗಳು

೧)ನೀನು:
ಓಲವ ಜಲವರಸಿ ಹೊರಟಾಗ ಸಿಕ್ಕ
ಓಲುಮೆಯ ಸರೋವರ
ನಿನ್ನ ತುಂಬಾ ಪ್ರೀತಿಯ ಕಮಲಗಳು
ಮತ್ತೆ ..ಮತ್ತೆ.. ಸವಿನುಡಿಯ ಹಂಸಗಳು.


೨)ನೀನು:
ಬಾನ ತುಂಬಾ ತಾರೆಗಳಿರಬಹುದು,
ಶಶಿಯಲ್ಲವೆ ಕೇಂದ್ರ ಬಿಂದು.
ಊರ ತುಂಬಾ ನೀರೆಯರಿರಬಹುದು,
ನೀ ನನ್ನ ಪ್ರೇಮಸಿಂಧು.

೧)ನಮ್ಮ ಪ್ರೀತಿ:
ಚಂದ್ರ-ತಾರೆಗಳಿರುವತನಕ,
ನದಿ ಸಾಗರ ಬತ್ತುವ ತನಕ,
ಭೂಮಿ ಬಿರಿಯುವ ತನಕ,
ಬೆಳೆದು, ಬೆಳೆದು,
ಬೆಳೆವ ಜೀವಳಿಗೆ ಸ್ಮಾರಕ.

3 ಕಾಮೆಂಟ್‌ಗಳು:

  1. ನೀನು:
    ಬಾನ ತುಂಬಾ ತಾರೆಗಳಿರಬಹುದು,
    ಶಶಿಯಲ್ಲವೆ ಕೇಂದ್ರ ಬಿಂದು.
    ಊರ ತುಂಬಾ ನೀರೆಯರಿರಬಹುದು,
    ನೀ ನನ್ನ ಪ್ರೇಮಸಿಂಧು.

    ನನ್ನ ಮನಸ್ಸು ಮೂಕವಾಯಿತು ಈ ಸಾಲುಗಳನ್ನ ನೋಡಿ.
    ಧನ್ಯವಾದಗಳು
    ಕುಮಾರಸ್ವಾಮಿ ಕಡಾಕೊಳ್ಳ
    ಪುಣೆ

    ಪ್ರತ್ಯುತ್ತರಅಳಿಸಿ
  2. ನನ್ನ ಮನಸ್ಸು ತುಂಬಾ ತುಂಬಾ ಹಗುರವಾಯಿತು. ನಿಮ್ಮ ಈ ಕವಿತೆಯನ್ನು ಓದಿ!

    ಪ್ರತ್ಯುತ್ತರಅಳಿಸಿ

ಈ ಬ್ಲಾಗ್ ಅನ್ನು ಹುಡುಕಿ