ಮಾರ್ಚ್ 19, 2008

ಸಮಯದ ಗೊಂಬೆ, ಮಾನವ.. ಸಮಯದ ಗೊಂಬೆ

ದಿನ ನನ್ನ ಜನುಮದಿನ.
ಭೂಮಿಯ ಮೇಲೆ ನಾನಿಗ ಒಂದು ವರ್ಷ ಜಾಸ್ತಿ ಹಳೆಯ ಪ್ರಾಣಿ.
ಇದೇ ದಿನ ಕೆಲ ವರ್ಷಗಳ ಹಿಂದೆ ಬಾರದೆ ಇರುವ ದೂರವಾಣಿಗಾಗಿ ಪರಿತಪಿಸಿದ್ದು ಇದೆ.ಬಂದ ಕರೆಗಳನ್ನ ಮರೆತದ್ದೂ ಇದೆ.

ಕತೆಗೆ ಮುಂಚೆ ಕವಿ ದುಂಡಿರಾಜ್ ಸಾಲು.
ಕ್ಯಾಲೆಂಡರ್: (kya -lender ??)
never gives you a day extra,even the costliest calender also has only 12 months.

ದುಂಡಿಗೆ ಯೋಚನೆ ಯಾಕ್ ಬಂತೊ ಗೋತ್ತಿಲ್ಲ ! ಆದ್ರೆ ನನ್ನ ಬದುಕಿನ ದಿನ ಮಾತ್ರ ನನ್ನಲ್ಲಿ ಯೊಚನೆ ಇದೆ. ನಂಗೆನೂಜಾಸ್ತಿ ಕೊರಗಿಲ್ಲ ,ಆದ್ರೆ ಕ್ಯಾಲೆಂಡರ್ ಜೊತೆ ಬದುಕೊ ಜನದ ಜೊತೆ ಇರೋದ್ರಿಂದ ನಾನು ಸ್ವಲ್ಪ ಯೋಚನೆ ಮಾಡ್ಬೆಕಿದೆ.

ಇಷ್ಟೋಂದು ವರ್ಷ ಆದ ಮೇಲೂ ನಂಗೆ ಸಣ್ಣ ಅನುಮಾನ ಇದೆ. ಹುಟ್ಟಿದ ಮೇಲೆ ಬದುಕೊದೆ ಅತೀ ದೊಡ್ಡ ಕೆಲಸವಾ ಅಂತ ?

ಭಾವನೆಗಳಿಲ್ಲದೆ ಬದುಕೊದು ಹೇಗೆ ಅಂತ ಇಗೀಗ ಗೊತ್ತಾಗ್ತ ಇದೆ. ಅದಕ್ಕೆ ಜನ professionalism,casuality ಅಂತೆಲ್ಲಾಕರಿತಾರೆ.ಮತ್ತೆ "Flirting is an art " ಅಂತ ಪುಷ್ಟಿ ಬೇರೆ. ಛೇ ಇದೆಲ್ಲ ಬದುಕಾ ಅಂತ ಬೇಸರವಾದ್ರೆ ಮುಗಿಯಲ್ವೆ, ಬುದ್ದಿ ಇದೆಅಂದ್ಮೇಲೆ ಬದುಕು ಏನು ಅಂತ ಕಂಡು ಹಿಡಿಲೇ ಬೇಕು.

ಈಗ ವಿಷಯಕ್ಕೆ ಬರ್ತಿನಿ, ನನ್ನ ವರ್ಷ ಹೇಗಿತ್ತು ಅಂದ್ರೆ ಮರ್ತು ಮುಂದೆ ಹೋಗೊ ಹಾಗೆ ಇತ್ತು.ಸಾಕಷ್ಟು ಯಶಸ್ಸು ದೊರಕಿದ್ರುಕೆಲವು ಕಹಿ ವಿಚಾರ ಮಾತ್ರ ಮಾಯದೆ ಇರುವ ಗಾಯ ಮಾಡಿವೆ.

ಎಲ್ಲೊ ಒಂದು ಕಡೆ ಜೀವನ research project ಆಗೋ ಥರ ಕಾಣ್ತಿದೆ. searching and searching ending up finding nothing ! :).

ಇಷ್ಟು ವರ್ಷ ಸಮಯದ ವಿಧೇಯ ವಿದ್ಯಾರ್ಥಿಯಾಗಿದ್ದ ನಾನು ಈಗೀಗ ಪ್ರಶ್ನೆ ಕೆಳಲು ಪ್ರಾರಂಭ ಮಾಡಿದ್ದೆನೆ.


ಎಲ್ಲೋ ಒಂದು ಕಡೆ ನಾನಿನ್ನು ಕೂಸು ಅಂತ ಅನ್ನಿಸುತ್ತೆ, ಅಪ್ಪ , ಅಮ್ಮನ ನೆನ್ಸ್ಕೊಂಡಾಗೆಲ್ಲ ಮನವರಿಕೆ ಆಗುತ್ತೆ,ಬದುಕಿರೊದೆಬದುಕೊದು ಹೇಗೆ ಅಂತ ಕಲಿಯೊದಕ್ಕೆ ಅಂತ ! ಕಲಿತ್ಮೆಲೆ ಇನ್ನೊಬ್ಬರಿಗೆ ಅವಕಾಶ ಅಷ್ತ್ಟೆ.

ದಿನಾ ಸವೆಯುತ್ತಿರುವ ಮೇಣಕ್ಕೆ ಗೊತ್ತೆ , ಯಾಕೆ ಸೊರಗುತಿಹುದೆಂದು.
ಸ್ವತಃ ಕರಗುತಿರುವ ದಿನ ಹೊಣೆಯೆ ?
ಕರಗುವ ಸೊರಗುವ ದಿನಗಳ ನಡುವೆ ಮೆರೆವ ದಿನದ ಹುಡುಕಾಟ.
ಬದುಕಿರೊವಷ್ಟು ದಿನ ಹೋರಾಟ.

ನನ್ ಹತ್ರ ಒಂದು ಹಡಗಿದೆ, ನಾನು ಸಾಗರದಲ್ಲಿದ್ದೆನೆ. ತೀರದ ಕಡೆಗೆ ಹೋಗ್ಬೆಕು ಅಂತ ಹುಟ್ಟು ಹಾಕ್ತ ಇದ್ದೆನೆ. ನನ್ ಜೊತೆ ಬಹಳಜನ ಇದ್ದ್ರು ಒಬ್ಬೊಬ್ರೆ ಬೇರೆ ಹಡಗು ಬಂದಾಗ ಕಡೆ ಹೊಗಿದ್ದಾರೆ. ಆದ್ರೆ ಈಗ ಉಳಿದಿರೊದ್ರಲ್ಲಿ ಕಳಚ್ಕೋಳೊರು ಕಡಿಮೆ ಇದ್ದಾರೆ. ಬಹಳ ಸಲ ಗಾಳಿ ನನಗೆ ಎದುರಾಗಿ ಬರುತ್ತೆ. ನಂಗೆ ಮಾತ್ರ ಗಾಳಿ ಬಡಿತಾ ಇದೆಯೆನೋ ಅನ್ಸುತ್ತೆ, ಜೊತೆಗಿರೊರ್ಬಗ್ಗೆ ಒಂದು ಸ್ವಲ್ಪಹೊತ್ತು ಮರ್ತೋಗುತ್ತೆ,ಆಮೇಲೆ ಮತ್ತೆ ನೆನಪಾಗುತ್ತೆ,
ಬರಿ ದಡ ಮುಟ್ಟಿದ್ರೆ ಸಾಲದು, ಮೊದ್ಲು ದಡ ಮುಟ್ಟಬೇಕು ಅಂತ.

ದಡಕ್ಕೆ ಗಾಳಿ ಮುಟ್ಸುತ್ತೊ ನಾನೆ ಮುಟ್ಟ್ತಿನೋ ಗೊತ್ತಿಲ್ಲ.

ಮತ್ತೊಂದು ಕವನ ನೆನಪಾಗ್ತಿದೆ , ಕೆ.ಯೆಸ್.ನಿಸ್ಸಾರ್ ಅಹ್ಮದ್ರದ್ದು,

ಹರಿವಿನ ದಿಕ್ಕಿಗೆ ಸಾಗಲು ಕೊಳೆತೊಂದು ಕಡ್ಡಿ ಸಾಕು.
ಪ್ರವಾಹಕ್ಕೆದುರಾಗಿ ಈಜಲು ಜೀವಂತ ಮತ್ಸ್ಯವೇ ಬೇಕು.


-ಒಂದು ವರ್ಷ

1 ಕಾಮೆಂಟ್‌:

ಈ ಬ್ಲಾಗ್ ಅನ್ನು ಹುಡುಕಿ