ಜೂನ್ 21, 2008

ಆತ್ಮದ ಕತೆ ಓದಿದ ನಂತರ ನಕ್ಕಿದ್ದು

ಇವತ್ತು ಬೆಳಿಗ್ಗೆಯಿಂದ ಸುಮ್ಮನೆ ಮನೆಯಲ್ಲಿ ಕುಳಿತಿದ್ದೆ. ಯಾಕೊ ನಾ ದಿನಾ ಮಾಡುತ್ತಿದ್ದ ಕೆಲಸಗಳೆಲ್ಲಾ ಬೇಸರ ತಂದಿದ್ದವು.
ಮಧ್ಯಾಹ್ನ ಈಟಿವಿಯಲ್ಲಿ ಆ ದಿನಗಳು ಸಿನೆಮಾ ಬರುತ್ತೆ ಅಂತ ಗೊತ್ತಾಗಿ ಸಿನಿಮಾಕ್ಕೊಸ್ಕರಾನೆ ಕಾಯ್ತಿದ್ದೆ.

ಪ್ರತಿಯೊಂದು ಅಡ್ವಟೈಸನ್ನೂ ಯಮಯಾತನೆ ತರಹ ಅನುಭವಿಸಿದ್ದಾಯ್ತು. ಇನ್ನೆನು ೪:೩೦ ಗೆ ಸಿನೆಮಾ ೪:೨೦ ಕ್ಕೆ ಕರೆಂಟು ಹೊಯ್ತು.
ಈ ಮುಂಚೆ ಯಾವತ್ತೂ ೫ ನಿಮಿಶಕ್ಕಿಂತ ಜಾಸ್ತಿ ಕರೆಂಟು ಹೊಗಿದ್ದು ಇಲ್ಲ. ಆದ್ರೆ ಇವತ್ತು ೬:೦೦ ಗಂಟೆವರ್ಗೂ ಕರೆಂಟು ಬರ್ಲಿಲ್ಲ.ಮಲಗಿಕೊಂಡೆ.

ಎದ್ದ ಮೇಲೆ ಸ್ವಲ್ಪ ಸುಮ್ಮ್ನೆ ಸ್ವಲ್ಪೊತ್ತು ಕೂತ್ಕೊಂಡು ಧ್ಯಾನ ಮಾಡೋ ಪ್ರಯತ್ನ ಮಾಡಿದೆ.ಯಾಕೊ ಮನ್ಸ್ಸಾಲಿಲ್ಲ.
ಆಮೇಲೆ ಕೈಗೆ ಸಿಕ್ಕ ಬ್ಲೊಗ್ ಗಳನ್ನು ಓದುತ್ತಿದ್ದೆ.ಬಹಳಷ್ಟು ಬ್ಲೊಗ್ ಗಳು ಆಧ್ಯಾತ್ಮದ ಕತೆ ಹೇಳುತ್ತಿದ್ದವು.

who will cry when i die ಅಂತ ಮುಂಬಯಿಯ ಚಿಕ್ಕ ಹುಡುಗಿ ಬರೆದ ಕವನ ಓದಿ ವಿಚಿತ್ರ ಅನ್ನಿಸಿತು. ಆತ್ಮ ಮತ್ತು ದೇಹದ ಕಲ್ಪನೆಯನ್ನ ಅರಗಿಸಿಕೊಳ್ಳುವುದು ಆಗಲಿಲ್ಲ.ಸತ್ತ ಮೇಲೆ ಆತ್ಮ ಕ್ಕೆ ಮತ್ತೆ ಹೊಸ ಜೀವ ಅಂತ ಬರೆದ ಕಲ್ಪನೆಯ ಬಗ್ಗೆ ನಗು ಬಂತು.
ಆತ್ಮದ ಅರಿವು ನಮಗೆ ಬರಬಹುದಾದರೆ ಅದಕ್ಕೆ ನಮ್ಮ ಅರಿವಿದೆಯೆ ?

ನನಗೆನೋ ಸತ್ತ ಮೇಲೆ ಬದುಕೋ ಯೋಚನೆ ಮಾಡೊ ಜನರ ಬಗ್ಗೆ ವಿಚಿತ್ರ ನಿರಾಸಕ್ತಿ. ವಿಷಯ ನನ್ನ ಅಭಿಪ್ರಾಯ ಹೊರತು ಆ ಹುಡುಗಿಯ ಕವನದ ಬಗೆಗಿನ ಯಾವುದೇ ರೀತಿಯ ವಿಮರ್ಶೆಯಲ್ಲ. ನನಗೆ ಆಶ್ಚರ್ಯವಾಗಿದ್ದು ಆ ಹುಡುಗಿಯ ವಯಸ್ಸು ಮತ್ತು ಕವನದ ನಡುವಿನ ಅಂತರ.

ನಾನ್ಯಾವತ್ತು ೨೦ ಮುಟ್ಟದ ಹುಡುಗ ಹುಡುಗಿ ಆತ್ಮ ಮತ್ತು ದೇಹದ ಬಗ್ಗೆ ಮಾತಾಡಿದ್ದನ್ನ ನೋಡಿರಲಿಲ್ಲ. ಅಷ್ಟೇ ಏಕೆ ಈಗಲೂ ನನ್ನಲ್ಲಿ ಬದುಕಿನ ಬಗ್ಗೆ ನಿರ್ದಿಷ್ಟ ಅಭಿಪ್ರಾಯ ಇಲ್ಲ.

ಯಾವುದು ಪ್ರೀತಿ,
ಯಾವುದು ನೀತಿ,
ಬದುಕಿಗೆ ಬಂದ್ದದ್ದೇ ಸೊಗಸು.

ಸಂಪೂರ್ಣವಾಗಿ ಸಮಯದ ಗುಲಾಮಗಿರಿ.ನಾನು ನನಗೆ ಅಂತ ಇಟ್ಟು ಕೊಂಡಿರುವ ಕನಸುಗಳಲ್ಲಿ, ಬದುಕನ್ನ ಸಲೀಸಾಗಿಸುವುದಿದೆಯೆ ಹೊರತು ,
ನನ್ನ ಬದುಕಿನ ಅರ್ಥ,ಕಾರಣ,ಗುರಿ ಅಂತಾ ನಾನು ಯೋಚನೆ ಮಾಡೋದು ನಿಲ್ಲಿಸಿಯಾಗಿದೆ.

ನಾನು ಹುಡುಕಲು ಪ್ರಯತ್ನ ಮಾಡಿದಾಗಲೆಲ್ಲ ನನಗೆ ದೊರೆತ ಸಮಾಧಾನಕರ ಉತ್ತರ ಬದುಕುವುದು, ಮತ್ತು ನಮ್ಮಷ್ಟಕ್ಕೆ ನಾವೆ ಬದುಕುವುದು ಅಂತ.
ಸಮಾಜ ಸೇವೆ ಅಂತ ಭಾಷಣ ಮಾಡೋ ಜನ ಸಿಕ್ಕಾಗೆಲ್ಲಾ,ಅವರಿಗಾಗಿ ಅದನ್ನ ಇವರಿಗಾಗಿ ಇದನ್ನ ಮಾಡ್ಬೇಕು ಅಂತ ಮಾತು ಕೇಳಿದಾಗಲೆಲ್ಲಾ
"ರಾಮ ಹುಟ್ಟಿದ್ದು ಕೊಲ್ಲೋಕೆ
"ಆದ್ರೆ ರಾವಣ ಹುಟ್ಟಿದ್ದು ಕೊಲ್ಲಿಸ್ಕೋಳ್ಳೋಕಾ ?.
ರಾಮ ಹುಟ್ಟಿದ್ದಕ್ಕೆ ಕಾರಣ ಹೇಳೋ ಜನ ಅಂತ ಅನ್ನಿಸುತ್ತೆ. ಬದುಕನ್ನ ನಮ್ಮಷ್ಟಕ್ಕೆ ನಾವೇ ಬದುಕುವುದೆ ಬದುಕಿನ ಗುರಿ. ಹಂಗಂತ ರಾಮಾಯಣದ ಮತ್ತು ರಾಮ ತಪ್ಪಂತ ಅಲ್ಲ, ರಾವಣ ಸೀತೆಯನ್ನ ಕದ್ದ, ರಾಮ ರಾವಣನ್ನ ಕೊಂದ.
ಸಮಾಜ ಸೇವೆ ಅನ್ನೋದು ನನ್ನ ಮಟ್ಟಿಗೆ ನಾನು ನಿಷ್ಟೆಯಿಂದ ಬದುಕುವುದರ ಉಪ ಉತ್ಪನ್ನ"(by product)".

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ