ಜುಲೈ 3, 2008

ಸ್ಲ್ಯಾಮ್ ಬುಕ್ ಎಂಬ ಒಂದು ವಕ್ತಾರ

ಮತ್ತೆ ನನ್ನ ಸ್ಲ್ಯಾಮ್ ಬುಕ್ ತೆಗೆದು ಓದುತ್ತಿದ್ದೆ, ಕಾಲೇಜಿನ ನೆನಪುಗಳು,ಕಾಲೇಜಿನ ಹುಡುಗಿಯರು,ಮತ್ತೆ ಮಾಸ್ತರರು ನೆನಪಾಗುತ್ತಿದ್ದಾರೆ.
ಹಾಸ್ಟೆಲ್ನಲ್ಲಿ ತುಂಬಾ ಹತ್ತಿರವಾಗಿದ್ದ ಕೆಲ ಗೆಳೆಯರ ನೆನಪು ಈಗ ನನ್ನಪ್ಪ ಆಗ ನನಗೆ ಕೊಟ್ಟಿದ್ದ ಒಂದು ಡೈರಿಯ ಮತ್ತೊಂದು ಹಾಳೆ ಮಾತ್ರ.

ಅದ್ರುಷ್ಟ ಇಲ್ಲೂ ನನ್ನ ಜೊತೆಗಿದೆ,ತುಂಬಾ ಗೆಳೆಯರು ಈಗಲೂ ಬಳಿಯಲ್ಲಿಯೆ ಇದ್ದಾರೆ.ಆದರೆ ಮರೆಯಾದವರು ಮಾತ್ರ ಡೈರಿಯ ಹಾಳೆ.
ನನಗೆ ಚೆನ್ನಾಗಿ ನೆನಪಿದೆ,ಸ್ಲ್ಯಾಮ್ ಬುಕ್ ತೆಗೆದುಕೊಂಡು ಕಾಲೇಜಿನ ಕೊನೆ ದಿನಗಳಲ್ಲಿ ಓಡಾಡುತ್ತಿದ್ದಾಗ ನಾ ಮಾಡುತ್ತಿದ್ದದ್ದು ನನ್ನ ಮರೆವನ್ನು ಮೆಟ್ಟಬೇಕೆನ್ನುವ್ವ ವಿಚಿತ್ರ ಹಟ.ಈ ಹಟದಲ್ಲಿ ನಾನು ನಾಲ್ಕು ವರ್ಷಗಳಲ್ಲಿ ನಾಲ್ಕು ಬಾರಿಯು ನೆಟ್ಟಗೆ ಮಾತನಾಡದವರ ಬಳಿಗೆ ಕೂಡ ಹೋದೆ.

ಇನ್ನೋಂದು hidden agenda ಇತ್ತು. ಬಹಳ ಸಲ ಗುಮ್ಮನಂತೆ ತೆಪ್ಪಗಿದ್ದ ನನ್ನ ಬಗ್ಗೆ ಮಿಕ್ಕಿದವರು ಏನು ಯೋಚನೆ ಮಾಡ್ತಿದ್ದಾರೆ ಅಂತ ನನಗೆ ಗೊತ್ತಾಗಬೇಕಿತ್ತು. ನನ್ನದೆ ಆದ ಗುಂಪಿನಲ್ಲಿ ನಾನು ಗುಮ್ಮನಿರಲಿಲ್ಲ,ಹಂಗತ ಉಳಿದವರಲ್ಲಿ ನಾನೇನು ತೆಪ್ಪಗಿರುವ ನಾಟಕವಾದಲ್ಲಿಲ್ಲ ಮತ್ತು ನನಗೆ ದೊಡ್ಡ ನಿರಾಸಕ್ತಿಯೇನು ಇರಲ್ಲಿಲ್ಲ, ಯಾಕೊ ನಾನು ಕಾಲೇಜಿಗೂ ನೆಟ್ಟಗೆ ಹೋಗಲ್ಲಿಲ್ಲ.ಮತ್ತೆ ನನ್ನ ಸ್ಲ್ಯಾಮ್ ಬುಕ್ ನಲ್ಲಿ ಯಾವ ಮಾಸ್ತರನು ಇಲ್ಲ.ಎಲ್ಲರೂ ನೆನಪಿದ್ದಾರೆ!!!!

ಮತ್ತೆ ಮರೆಯಾದ ಗೆಳೆಯರಿದ್ದಾರಲ್ಲಾ,ಅವ್ರು ಈವರೆಗು ಸಿಕ್ಕಿಲ್ಲ.ಬದುಕಿನ ಗಿಡಕ್ಕಿರುವ ಸಾವಿರಾರು ಕವಲುಗಳ ಎಲ್ಲಾ ಕೊನೆಗಳನ್ನು ನೋಡುವುದು ಅಸಾಧ್ಯ.ಕೊಂಬೆ ದೊಡ್ಡದಾಗಿದೆ ಅನ್ನೋ ಸಮಾಧಾನ.

ಅಲ್ಲಿಗೆ ನನ್ನ ಮರೆವು ಕೆವಲ ಪೆನ್ನು,ಪುಸ್ತಕ,ಮೊಬೈಲ್ಗೆ ಮಾತ್ರ ಸೀಮಿತ.ಮನುಷ್ಯರನ್ನೆ ಮರೆವಷ್ಟು ಮೂರ್ಖತನ ನನಗಿಲ್ಲ. ಆದರೆ ಸ್ಲ್ಯಾಮ್ ಬುಕ್ನಿಂದ ಓಂದು ಉಪಯೋಗ ಆಗಿದೆ.ಕಿಶೋರ್ ಕುಮಾರ್ನ ಹಾಡಿದೆಯಲ್ಲಾ,


ಆತೆ ಜಾತೆ ಖೂಬಸೂರತ್ ಆವಾರ ಸಡಕೋಂಪೆ,
ಕಭಿ ಕಭಿ ಇತ್ತಫಾಕ್ ಸೆ...............
ಉನ್ಮೆಸೆ ಕುಚ್ ಲೋಗ್ ಭೂಲ್ ಜಾತೆ ಹೈ, ಅವ್ರು ಹಾಳೆಯಾಗಿದ್ದಾರೆ.ಹಾಳೆಯಾಗಿ ನೆನಪಿದ್ದಾರೆ.

ಮತ್ತೋಂದು ಬಹಳ ಓಳ್ಳೆ ಉಪಯೋಗವಾಗಿದೆ.ಸ್ಲ್ಯಾಮ್ ಬುಕ್ ಬರೆದ ಹುಡಿಗಿಯೊಬ್ಬಳ ಅಂದವಾದ ಬರವಣಿಗೆ ನನ್ನಲ್ಲಿ ಬಹಳ ಮಧುರವಾದ ಭಾವನೆಯೊಂದನ್ನ ತಂದಿತ್ತು.ಬರವಣಿಗೆ ಶಿಸ್ತಿನ ಲಕ್ಷಣವೆಂದು ನಂಬಿದ್ದು ಮತ್ತೋಂದು ಕಾರಣವಾಗಿತ್ತು, ಹೆಚ್ಹೂ ಕಮ್ಮಿ ಅಲ್ಲಿಗೆ ಮುಗಿತು.
ಮತ್ತೆ ಸ್ಲ್ಯಾಮ್ ಬುಕ್ ಓದಿದೆ ಮತ್ತೆ ನೆನಪಾದಳು,ಬುಕ್ ಮುಚ್ಚಿದಾಗ ಮರೆಯಾದಳು :).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ