ಇಲ್ಲ ಸಲ್ಲದ ಕೆಲಸವ ಮಾಡಿ
ಕಳ್ಳ ಹಣವನು ಕೂಡಿಡುವೆ
ಪಾಪ ಪ್ರಜ್ಞೆಯು ಕಾಡಲು ನಿನ್ನ
ದೇವಗೆ ಲಂಚ ನೀ ಕೊಡುವೆ
ತಿರುಪತಿ ಹುಂಡಿ ತುಂಬಿದ ಮೇಲು
ನಿನ್ನ ಪಾಪದ ಹೊರೆ ಮೇಲು
ದೇವರ ಹುಡುಕುತ
ಲಂಚವನೀಯಲು ಕಾತರದಿಂದ ಹೊರಟಿರುವೆ
ಪಾಪದ ಹಣವನು ಪಡೆದ ತಪ್ಪಿಗೆ
ದೇವರು ತಾನೂ ನೊಂದಿರುವ
ಅದಕ್ಕೆ ನೋಡೋ ಮಗನೆ ಈಗ
ಬಿಡದಿ ಭೂಪ ಹುಟ್ಟಿರುವ
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ. ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಏಪ್ರಿ 27, 2010
ಕಾಗೆ (ನಮ್ಮ ನಾಯಕರು)
ಕಾಗೆಯ ಗುಂಪಿಗೆ ಕಾಕನ ಹಾಡೇ ಇಂಪಾಗಿಹುದು ಕೇಳಣ್ಣ
ಕೋಗಿಲೆ ದನಿಯನು ಕೇಳಿದ ಒಡನೆಯೆ
ರೊಚ್ಚಿಗೆಳುವ ಕಾಗಣ್ಣ.
ಕಾವ್ ಕಾವ್ ಅಂದ ಕೂಡಲೇ
ಬಂದು ಸೇರುವ ಹಿಂಡಣ್ಣ, ಎಲ್ಲರು ಹಾಡುವ ಬಾಯೇ ಅಲ್ಲಿ
ಕೇಳುವ ಕಿವಿಯು ಇಲ್ಲಣ್ಣ.

ಚಿತ್ರೋದ್ದ್ಯಮ
ಕನ್ನಡಕ್ಕಿಷ್ಟು ಕನಿಕರವಿಲ್ಲದೆ ಎಂಥೆಂಥಾ ಸಿನಿಮಾ ಮಾಡ್ತಿರ್ರಿ
ತೆಲುಗು ತಮಿಳಿನ ಕತೆಗಳ ತಂದು ಸ್ವಂತಿಕೆಯನ್ನ ಕೊಲ್ತಿರ್ರಿ
ಥೇಟರ್ ಖಾಲಿ ಹೊಡೆದರೆ ನೀವು ಕುಯ್ ಕುಯ್ ರಾಗ ಹಾಡ್ತಿರ್ರಿ

ಒಂದು ಮಳೆ ಹಿಟ್ ಆದರೆ ಬರೀ ಮಳೆ ತರ್ತಿರ್ರಿ
ಮಳೆಗೆ ಬಂಡವಾಳ ಕೊಚ್ಗಂಡು ಹೋದರೆ ಕುಯ್ ಕುಯ್ ರಾಗ ಹಾಡ್ತಿರ್ರಿ

ತವರು,ತಂಗಿ,ಕರುಳು,ಮಚ್ಚು ಎಲ್ಲ ಅತಿಯಾಗಿ ಕುಯ್ತಿರ್ರಿ
ವಾಂತಿ ಭೇದಿ ಆಯ್ತು ಅಂತ , ಮನ್ಯಾಗ ಕುಂತ್ಕಂಡ್ ಅಳುತಿರ್ರಿ

ಹಣ ಇರುವ ಹೆಣವನು ತಂದು ಇವನೇ ಹೀರೋ ಅಂತಿರ್ರಿ
ಜನ ಥೇಟರ್ಗೆ ಹೋಗ್ಲಿಲ್ಲಂತ ಕುಯ್ ಕುಯ್ ರಾಗ ಹಾಡ್ತಿರ್ರಿ

ಹೀರೋಯಿನ್ ಮಾಡ್ತಿನಂತ ಹುಡ್ಗೀರ್ ಮಾನ ಕಳಿತಿರ್ರಿ
ಮರ್ಯಾದಸ್ತರು ನೋಡ್ಲಿಲ್ಲಂತ ಕುಯ್ ಕುಯ್ ರಾಗ ಹಾಡ್ತಿರ್ರಿ

ನಿಮ್ಮ ಚಟಕ್ಕೆ ನೀವೇನೋ ಮಾಡಿ ಭಾಷೆನ್ಯಾಕೆ ಕೊಲ್ತಿರ್ರಿ
ಭಾಷೆ ಕೊಲ್ಲೋರ್ಗೆಲ್ಲ ಯಾಕೆ ಸಬ್ಸಿಡಿ ಕೊಡಬೇಕ್ರಿ

ಏಪ್ರಿ 21, 2010
ಬೆಂಗಳೂರೆಂಬ ಅನಿವಾರ್ಯ ಮೋಹಿನಿ
ಬೆಂಗಳೂರಿನಲ್ಲಿ , ಬೆಳಕಾದರೆ ಆ ಹೊಸೂರು ರೋಡ್ ನಲ್ಲಿ ಟ್ರಾಫಿಕ್ ಜಾಮ್ , ೯:೦೦ ಗಂಟೆಗೆ ಮನೆಯಿಂದ ಹೊರಟರೆ ಆಫೀಸಿಗೆ ಹೋಗೋಕೆ ಹನ್ನೊಂದು ಗಂಟೆ , ಆ ಎರಡು ಗಂಟೆ ರೋಡಿನ ಮೇಲೆ ನರಕ , ನಿಲ್ಲಾಕೆ ಜಾಗ ಇಲ್ಲದೆ ಎಲ್ಲಂದರಲ್ಲಿ ನಿಲ್ಲೋ bmtc ಬಸ್ಸು , ಅದನ್ನ ಹತ್ತಾಕೆ ಅಂತ ಉಳಿದ ಯಾವುದೇ ವಾಹನ ಕೇರ್ ಮಾಡದೆ ರೋಡಿನ ಮೇಲೆ ನುಗ್ಗೋ ಜನ , ಅವರ ಮದ್ಯದಲ್ಲಿ two ವ್ಹೀಲರ್ ಗಳನ್ನ ನುಗ್ಗಿಸಿಕೊಂಡು , ತಮ್ಮ ಜೀವಕ್ಕೂ ಅಪಾಯ ತಂದ್ಕೊಂದು , ಇನ್ನೋಬರ್ರಿಗೂ ಅದೃಷ್ಟ ಪರೀಕ್ಷೆ ಮಾಡಿ , ಅದರ ಭರವಸೆ ಯಲ್ಲಿ ಬದುಕೋ ಅವಸರದ ಜನ , ಸಾಲದು ಅಂದ್ರೆ ಟ್ರಾಫಿಕ್ ನಲ್ಲಿ ನಿಂತಾಗ ವಜ್ರ ನ ತಿಕದಿಂದ ಮುಖಕ್ಕೆ ರಾಚೋ ಬಿಸಿ ಗಾಳಿ . footpaath ಮೇಲು ನಮ್ಮ rider ಗಳದ್ದೇ ದರ್ಬಾರು, ಇದು ಸಾಲದು ಅಂತ , ಪ್ರೈವೇಟ್ vehical's ಬೇರೆ , ನೆಸೀಬು ತೀರ ಕೆಟ್ಟದಾಗಿದ್ರೆ ಅದ್ರಾಗಿಂದ ಬಾರೋ ತೆಲಗು ತಮಿಳ್ ಸಿನಿಮಾ ಡೈಲಾಗು ಕೂಡ ಸುಪ್ರಭಾತ .
ಅಸ್ಟಾಯ್ತು ಅಂತೀರಾ , ಹಾಗೋ ಹೀಗೋ ಆಫಿಸಿಗೆ ಬಂದ ಮೇಲೆ , ಕೆಲಸ ಮಾಡಿ ಮಧ್ಯ್ಯಾಹ್ನ ಊಟ ಮಾಡೋಣ ಅಂದ್ರೆ , ಹಿಗ್ಗಾ , ಮುಗ್ಗಾ ದುಡ್ಡು ಇಸ್ಕಂಡು ಕ್ಯಾಂಟೀನ್ ನಲ್ಲಿ ಕೊಡೊ ಆರಿದ ರೈಸ್ ಬೇಡ ಅಂದ್ರೆ ಸಿಕ್ಕೋದು ಸಮೋಸ ಮತ್ತೆ ಬರ್ಗರ್ ಇದು ಬೇಡ ಅಂದ್ರೆ ಮುಂಜಾನೆ ನೋಡಿದ ನರಕವನ್ನ ಮಧ್ಯಾಹ್ನ ಕೂಡ ನೋಡ್ಬೇಕು. ಊಟದ ಸಹವಾಸ ಬೇಡ ಅನ್ನಿಸಿಬಿಡುತ್ತೆ .
ಮತ್ತೆ ರಾತ್ರಿ ಮನೆಗೆ ಹೋಗಬೇಕಾದ್ರೆ ಆಟೋ ದವರ ಸುಲಿಗೆ , ಮಾತಾಡಿದರೆ ಮೀಟರ್ ಮೇಲೆ , ಮೀಟರ್ನ ಸ್ಪೀಡು ಆಟೋ ಕ್ಕಿಂತ ಜೋರು . ಬಸ್ಸಿಗೆ ಹೋಗೋಣ ಅಂದ್ರೆ , ಅವು ತುಂಬಿ ತುಳುಕ್ಥಾ ಇರ್ತವೆ . ಇದೆಲ್ಲದರ ಮಧ್ಯ ಮನೆಗೆ ತರಕಾರಿ ಖರೀದಿ , ಸ್ಕೂಲ್ ಗೆ ಹೋಗಿರೋ ಮಕ್ಕಳ ಚಿಂತೆ , ಖಾಯಿಲೆ ಬಿದ್ದರೆ ಸುಲಿಯೋ ಹೈಟೆಕ್ ಆಸ್ಪತ್ರೆ , ಜೊತೆಗೆ ಇರುವ ಮನೆ ದೋಸೆಯ ತೂತು ಗಳು
ಈ ಪುಣ್ಯಕ್ಕೆ ಸಿಕ್ಕಿರುವುದು ಬೆಂಗಳೂರು ಎಂಬ ಮಾಯಾಂಗನೆಯ ಸಹವಾಸ
ಬೆಂಗಳೂರಿನ ನೆಮ್ಮದಿ ದೇವರಿಗೆ ಪ್ರೀತಿ . ನಮ್ಮೂರಲ್ಲಿ ನಮಗೆ ಅನ್ನದ ಋಣವಿರದೆ ಇಲ್ಲಿಗೆ ಬಂದಿರುವ ಪಾಪಾತ್ಮವೇನೋ ಎಂಬ ಚಿಂತೆ .
ಏನ್ಮಾಡೋದು ಇವಳ ಸೆರಗು ಬಿಟ್ಟರೆ ಕಷ್ಟವೇ ಜಾಸ್ತಿ . ಇರೋ ಬರೋ ಅವಕಾಶಗಳೆಲ್ಲ ಇವಳ ಮಡಿಲಲ್ಲೇ ಇದೆ . ಬೆಂಗಳುರನ್ನ ಬೆಳಸುತ್ತಿರುವ ಜನ ಈ ಸುಂದರಿಯ , ಸೌಂದರ್ಯ ವನ್ನ , ಇಲ್ಲಿರುವ ಒಳ್ಳೆ ವಾತಾವರಣವನ್ನ ಲೂಟಿ ಹೊಡೆದು ಬರಿದು ಮಾಡುತ್ತಿದ್ದಾರೆ .
ದೇವರೇ ನನಗೆ ದಾರಿ ತೋರಿಸು , "ವರ್ಕ್ ಫ್ರಂ ಹೋಂ " ಅನ್ನೋ ತಂತ್ರ ಬೆಂಗಳುರಿಗೂ ತರಿಸು

ಯಾರು ನಿನ್ನ ಹೀರೋ
ಗೌಡ ನಾಟಕದವರಿಗೆ ಹಣ ಕೊಟ್ಟು ಊರೊಳಗೆ ನಾಟಕ ಆಡಿಸೋದು ಯಾಕೆ ?
ಬಯಲಾಟದ ಪಾತ್ರಧಾರಿ ಮೇಸ್ಟ್ರಿಗೆ ಹಣ ಕೊಟ್ಟು ಕುಣಿಯೋದು ಯಾಕೆ ?
ದಸರಾದಲ್ಲಿ ಮಹಾರಾಜ ಕುಸ್ತಿ ಆಡಿಸಿದ್ದು ಯಾಕೆ ?
ಅದೆಲ್ಲ ಕೇವಲ ಮನೋರಂಜನೆ ಮಾತ್ರ. ದಣಿದ ಮನಕೆ ಉಲ್ಲಾಸ ನೀಡಲು ಹುಟ್ಟಿದ ಹವ್ಯಾಸಗಳು ಅವು. ಆ ಹವ್ಯಾಸಗಳನ್ನುಬದುಕಾಗಿಸಿಕೊಂಡ ಕಲಾವಿದರು ವೃತ್ತಿಪರ entertainers.
ಅವರಿಗೆಲ್ಲ ಆ ವಿಷಯ ಚೆನ್ನಾಗಿ ಗೊತ್ತಿತ್ತು. ಮತ್ತು ಜನ ಕೂಡ ಈ ಸತ್ಯವನ್ನು ಅರಿತುಕೊಂಡಿದ್ದರು.
ಜನ ಆಗ ಮುಗ್ಧರಾಗಿದ್ದರು ,ಮೂಡರಲ್ಲ. ಅವರು ಈ ಮನೋರಂಜನೆಯನ್ನ ಬದುಕಿನ ಭಾಗವಾಗಿ ನೋಡಿದರು, ಅದಕಾಗಿಬದುಕನ್ನೇ ಮರೆಯಲಿಲ್ಲ.
ಈಗ ಏನಾಗಿದೆ ?
ಜನರಲ್ಲಿ ಅಭಿವೃದ್ದಿಯ ಜೊತೆಗೆ ಬೌದ್ದಿಕ ಬಡತನ ಬಂದಿದೆ.
ಸಿನೆಮಾ ನೋಡಿ ನೋಡಿ ದಣಿಯುವುದು, ಕ್ರಿಕೆಟ್ ನೋಡಿ ನೋಡಿ ದಣಿಯುವುದು ಬದುಕು ಮುಗಿಯೋ ಹೊತ್ತಿಗೆ ನಾನೇನುಮಾಡಿದೆ ಅಂತ ಕೇಳಿ ಸಾಯೋದು .
ಬ್ಲಾಕ್ ಮನಿ ಯನ್ನು ವೈಟ್ ಮಾಡಲು ಸುವರ್ಗಳನ್ನ ಹಾಕ್ಕೊಂಡು ಸಿನಿಮಾ ಮಾಡೋರು , ಹುಚ್ಚ ಮುಂಡೆ ಮದ್ವ್ಯಗೆ ಉಂಡಲೆಕ್ಕದಾಗೆ ಆಡಿ ಬುಕ್ಕಿ ಗಳ ಸೆಗಣಿ ತಿನ್ನೋರು, ಇವರೆಲ್ಲರ ಹಿಂದೆ ಹೋಗೋ ಮೂಡ ಜನ , ಇವರೆಲ್ಲರಿಗಿಂತಲೂ ಹೆಚ್ಚಾಗಿ ಜನಸಾಮಾನ್ಯರನ್ನ ಖದಿಮರ ಸೆಳೆತಕ್ಕೆ ಸಿಲುಕಿಸಿ pimp ಗಳಂತೆ ಕೆಲಸ ಮಾಡುತ್ತಿರುವ ಮಾಧ್ಯಮದವರು ಇರುವವರೆಗೆ
ಯಾರು ನಿನ್ನ ಹೀರೋ ಹೇಳೋ ಮಗು ??

ಬೆಳಗುವ ಮುನ್ನ ಉರಿಯುತ್ತಿರುವೆ
ಎಲ್ಲರ ಕನಸ ಕೊಂದು ಅಳುತಿರುವೆ ಯಾಕೆ ಮರುಳೆ
ಕಟುಕ ಮರುಕ ಪಡುವಂತಹ ಬದುಕ ಹಂಚಿದವಳೆ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ
ಬದುಕಿಗೆ ಹೊಣೆ ಯಾರ್ಯಾರೋ ಆದರೆ
ನೀ ಬದುಕುವುದು ಯಾಕೆ ಹೇಳೇ
ಸ್ವಂತಿಕೆ ಮರೆತ ಹೆಣ್ಣಿಗೆ ,ಸಿಹಿ ಕಳೆದುಕೊಂಡ ಹಣ್ಣಿಗೆ ವ್ಯತ್ಯಾಸ ಹೇಳೇ
ಕ್ಷಮೆ ಯಾಕೆ ನಿನಗೆ ಪಾಪ ಕೂಪದಲಿ ಮಿಂದ ಮೇಲೆ
ಸುಖವನು ಹುಡುಕ ಹೋರಾಟ ಮೂರ್ಖರಿಗೆ ಸಿಕ್ಕ ಸುಖ ಗೊತ್ತೇ ?
ಅವರು ಮೂರ್ಖರು ಎಂಬ ಸತ್ಯದ ಅರಿವು
ಅದಾದರೂ ಸಿಗಬಹುದು ನಿನಗೆ

ನವೆಂ 9, 2008
ಬೆಂಗಳೂರಿಗೆ ವರ್ಷಕ್ಕೋಮ್ಮೆ ಜೊತೆಯಾಗಿ ಬರುವ ಕನ್ನಡ ಮತ್ತು ನವೆಂಬರ್ ೧
ಬೆಂಗಳೂರಿಗೆ ಕೆಲ ದಿನಗಳ ಹಿಂದೆ ಕನ್ನಡ ಬಂತು. ೧ ತಿಂಗಳವರೆಗೆ ಇರಬಹುದು.ಈ ಸಲ ಶಾಸ್ತ್ರೀಯ ಸ್ಥಾನಮಾನ ಕೂಡಾಸಿಕ್ಕಿತು.
ಪತ್ರಿಕೆ ಓದಿ ಖುಶಿಯಾಯಿತು. ನನಗೆ ಈ ಶಾಸ್ತ್ರೀಯ ಸ್ಥಾನಮಾನದಿಂದ ಭಾಷೆಗಾಗುವ ಲಾಭಗಳ ಬಗ್ಗೆ ಮಾಹಿತಿ ಸ್ವಲ್ಪ ಕಡಿಮೆಯೆ. ಆದರೂ ಪತ್ರಿಕೆ ಓದಿದ ನಂತರ ಕೇಂದ್ರ ಸರ್ಕಾರ ಕೊಡುವ ಅನುದಾನಗಳ ಬಗ್ಗೆ ತಿಳಿಯಿತು.ಭಾಷಾದ್ಯಯನಕ್ಕೊಂದುಕೇಂದ್ರ,ಅದಕ್ಕೋಂದಿಷ್ಟು ಹಣ.
ಭಾಷೆಗೆ ಆಡುಗರ ಬಾಯಲ್ಲಿ ಸಿಗಬೇಕಾದ ಸ್ಥಾನಮಾನಗಳನ್ನ ಸರ್ಕಾರಿ ಕಡತಗಳಿಗೆ ಸೇರಿಸಿ ಬೆನ್ನು ತಟ್ಟಿಕೊಳ್ಳುತ್ತಿರುವ ಹುಂಬರಬಗ್ಗೆ ನಗು ಬಂತು.
ಕರ್ನಾಟಕದಲ್ಲಿ ಕನ್ನಡ ಸಾಯುತ್ತಿರುವುದಕ್ಕೆ ಕಾರಣ ಹಣದ ಅಥವಾ ಅಧ್ಯಯನಕೇಂದ್ರಗಳ ಕೊರತೆಯಲ್ಲ. ಕನ್ನಡದ ಬಗ್ಗೆ ಆಡುಗನಿಗೆಇರುವ ಅಸಡ್ಡೆ.
ಕನ್ನಡ ಮಾತನಾಡುವವರ ಸಂಖ್ಯೆ ಬೆಂಗಳೂರಲ್ಲಿ ಕಡಿಮೆಯಾಗುತ್ತಿದೆ,ಹಾಗಂತ ಬೆಂಗಳೂರಿಗರಿಗೆ ಕನ್ನಡ ಬರೋದಿಲ್ಲ ಅಂತಅಂದ್ಕೊಬೇಡಿ, ಬರುತ್ತೆ ಆದ್ರೆ ಅವ್ರು ಮಾತಾಡೊದಿಲ್ಲ. ಅವಶ್ಯಕತೆ ಇಲ್ಲ

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಈ ಬ್ಲಾಗ್ ಅನ್ನು ಹುಡುಕಿ
- ಏಪ್ರಿಲ್ 2020 (1)
- ಮಾರ್ಚ್ 2020 (1)
- ಸೆಪ್ಟೆಂಬರ್ 2019 (1)
- ಸೆಪ್ಟೆಂಬರ್ 2017 (2)
- ಅಕ್ಟೋಬರ್ 2010 (1)
- ಮೇ 2010 (5)
- ಏಪ್ರಿಲ್ 2010 (8)
- ನವೆಂಬರ್ 2008 (1)
- ಆಗಸ್ಟ್ 2008 (1)
- ಜುಲೈ 2008 (5)
- ಜೂನ್ 2008 (3)
- ಮೇ 2008 (3)
- ಮಾರ್ಚ್ 2008 (5)