ಅರಿಕೆ:
ತಪ್ಪು-ಒಪ್ಪುಗಳ ಪರಿವೆಯಿಲ್ಲದ ನಿನ್ನ ಪ್ರೀತಿ
ಇಂದೆನ್ನ ಆತ್ಮಶಕ್ತಿ,
ಸ್ಪೂರ್ತಿಯ ಸೆಲೆ.
ಕಾಮನ ಕಣ್ಸೊಕಿ ಕೊಳೆಯಾಗಲು
ಬಿಡಬೇಡ ಗೆಳತಿ ನೀ ಇದನ್ನ
ನಿನ್ನ ಶ್ವೇತ ಮನದಿ ಬಚ್ಚಿಡು ನನ್ನ ಪ್ರೀತಿಯನ್ನ
ಜನ-ಜಂಗುಳಿಯಲಿ ಕಳೆಯದ ಪ್ರೀತಿ
ನೋವಿನಲು ಮರೆಯದ ಪ್ರೀತಿ
ಕಾಲನಿಗೂ ಸೋಲದ ಪ್ರೀತಿ ನನ್ನದು
............ಜೋಪಾನವಾಗಿದುವ ಹೊಣೆ ನಿನ್ನದು
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ. ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸ್ರುಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ಮೇ 18, 2008
ನಾ ಬರೆದ ಕವನಗಳು-ನಿನಗಾಗಿ ೨
ನಿನ್ನೋಲುಮೆ:
ನಿನ್ನೊಲವ ನಿರೀಕ್ಷೆ ,
ನನ್ನ ಬದುಕ ಬೆಳೆವಂತಹ ಸಾಧನ.
ನವಿಲೊಂದು ಮುಂಗಾರ ಮಳೆಗಾಗಿ ಕಾಯ್ವಂತೆ
ನಿನ್ನ ಕಾಯುತ್ತಿರುವ ಮನ ನನ್ನದು
ತಿಂಗಳ ಬೆಳಕಾಗಿ ಬಾ ನನ್ನ ಬಾಳಂಗಳಕ್ಕೆ
ನಗೆಯ ಹೂವಾಗಿ ಬಾ ನನ್ನ ಬಾಳ್ದೋಟಕ್ಕೆ
ಸ್ಪೂರ್ತಿ ಸೆಲೆಯಾಗಿ ಬಾ ನನ್ನ ಬಾಳ ಹೋರಾಟಕ್ಕೆ
ಗೆಲುವಿನಲಿ ನಗೆಯಾಗಿ
ಸೋಲಿನಲಿ ಜೊತೆಯಾಗಿ
ನಾನೆರುವ ಎತ್ತರಕ್ಕೆ ಏಣಿಯಾಗಿ
ನೀನಿರುವ ಜೀವನದ ನಿರೀಕ್ಷೆ ..............ನನ್ನ ಬದುಕ ಬೆಳೆವಂತಹ ಸಾಧನ.

ಮೇ 15, 2008
ಅರಮನೆ
ಇವತ್ತು ದಿವಾಕರ್ ನ ಮದುವೆಗೆ ನಾನು ಆತ್ಮ ಮತ್ತೆ ರಾಖಿ ಹೊಗಿದ್ವಿ. ಗೋಪಿ,ರವಿ,ಸೂರಿ,ಸತ್ಯ,ಇಮ್ತಿ,ಜಯ,ಸಿದ್ದ ಎಲ್ಲ ಬಂದಿದ್ರು.
ತರ್ಲೆ ಮಾಡ್ತಾ ಶ್ರೀಮಂತ ಮದುವೆಯ ಭಾರೀ ಭೋಜನ ಕಂಟ ಪೂರ್ತಿ ಇಳಿಸಿ ಸಿನೆಮಾ ನೋಡೊಕೆ ಫ಼ೋರಂಗೆ ಬಂದ್ವಿ.
ನಾನು,ವೇಣು,ಆತ್ಮ,ರಾಕಿ ಸಿನೆಮಾ ಕ್ಕೆ ಮಿಕ್ಕಿದೋರು ಮನೆಗೆ :).
ವೇಣು ಇದ್ರೆ ನಮ್ಗೆಲ್ಲಾ ಕನ್ನಡ ಸಿನೆಮ ಖಾತ್ರಿ,ಪಾಪ ಚೆನ್ನೈಲಿ ಇರ್ತಾನೆ ಅಂತಾ ಯಾರು ತಕರಾರು ಮಾಡ್ದೆ ಕನ್ನಡ ಸಿನೆಮಾ ನೊಡೋಕೆ ಒಪ್ಪ್ಕೊತಿವಿ.
ಹಂಗಂತ ಕನ್ನಡ ಸಿನೆಮಾ ಕೆಟ್ಟದು ಅಂತೆನು ಇಲ್ಲ,ಎನೇ ಆದ್ರು, ಸಾಯಿ,ಪಾಂಡ್ಯನ್,ಥ್ರಿಲ್ಲರ್, ಸಾಲದ್ದಕ್ಕೆ ಗುಲ್ಜಾರ್,ಬಸಂತ್ ಕುಮಾರ್ನ ಸಹಿಸಿಕೊಂಡ ತಳಿ ನಮ್ದು.
ಈಗೀಗ ಮುಂಗಾರು ಮಳೆ ನಂತರ ಉಸಿರಾಡ್ಕೊಂಡು ಕನ್ನಡ ಸಿನೆಮಾ ನೋಡ ಬಹುದು, (ಆ ದಿನಗಳು ಬಾಕಿ ಇದೆ).
ಅರಮನೆಗೆ ಹೋದ್ವಿ, ಶಂಕರ್ನಾಗ್ ರ ಅಣ್ಣ ಅನಂತು (ಯುವಕ), ಮತ್ತೆ ಗೊಲ್ದನ್ ಗಣೇಶ,ಸಿನೆಮಾ ಹಿಡಿಸ್ತು, ಮದ್ಯ ಸ್ವಲ್ಪ ಬೇಜಾರಾಗ್ತಿದೆ ಅನ್ನಿಸಿದರು ಆರೋಪ ಮಾಡೋಕೆ ಕೆಟ್ಟದ್ದು ಸಿನಿಮಾದಲ್ಲಿ ಇರ್ಲಿಲ್ಲ. ಖುಶಿಯಾಯ್ತು.
ಸಿನೆಮಾ ಮುಗಿಯೋ ಹೊತ್ತಿಗೆ ಕೊನೆ ಹಾಡಿಗೆ ನಗು ಬಂತು, ಪ್ಲೇ ಬ್ಯಾಕ್ ಸಿಂಗರ್ ಗುರುಕಿರಣ್ ಓಕೆ, ಸ್ಟೇಜ್ ಮ್ಯಾಲೆ ಯಾಕೆ ?
ಲೂಸ್ ಮಾದ ಹೀರೋ ಆದ್ರೆ ನೀನ್ಯಾಕೆ ಆಗ್ಬಾರ್ದು, ಅದು ಆಗೆ ಬಿಡ್ಲಿ,
ನಾನು ನೋಡೊದಿಲ್ಲಪ್ಪ ರೂಡಿ ತಪ್ಪಿದೆ,ಸಹನೆ ಮೊದ್ಲಿನಂತೆ ಇಲ್ಲ.!!!!!
ಗಣೇಶ ತುಂಬಾ ಖುಶಿ ಕೊಟ್ಟ, ನಾಯಕಿಯ ತಂಗಿ ನಾಳೆಯ ನಾಯಕಿ ಅಂತ ನಾವೆಲ್ಲ ಪಿಟ್ಲು ಹಾಕಿದ್ದು ಆಯ್ತು.
ಆಮೆಲೆ ಒಂದು ಸಣ್ಣ ಅನುಮಾನ ಬಂತು, ಕಲ್ಲಿಗೆ ಸಂಕಟ ಬಂದ್ರೆ ಏನು ಮಾಡುತ್ತೆ ಅಂತ?, ಅರಮನೆ ಗಣೆಶನ್ನ ನೆನಸಿಕೊಂಡು ಸುಮ್ಮನಾಗುತ್ತೆ.
ಇಂತಿ ಒಂದು ಗುರುವಾರಕ್ಕೆ ಅವಾಂತರಗಳ ಸಮೇತ ಮಂಗಳ.

ಮಾರ್ಚ್ 24, 2008
ಮಾರ್ಚ್ 19, 2008
ಸಮಯದ ಗೊಂಬೆ, ಮಾನವ.. ಸಮಯದ ಗೊಂಬೆ
ಈ ದಿನ ನನ್ನ ಜನುಮದಿನ.
ಭೂಮಿಯ ಮೇಲೆ ನಾನಿಗ ಒಂದು ವರ್ಷ ಜಾಸ್ತಿ ಹಳೆಯ ಪ್ರಾಣಿ.
ಇದೇ ದಿನ ಕೆಲ ವರ್ಷಗಳ ಹಿಂದೆ ಬಾರದೆ ಇರುವ ದೂರವಾಣಿಗಾಗಿ ಪರಿತಪಿಸಿದ್ದು ಇದೆ.ಬಂದ ಕರೆಗಳನ್ನ ಮರೆತದ್ದೂ ಇದೆ.
ಕತೆಗೆ ಮುಂಚೆ ಕವಿ ದುಂಡಿರಾಜ್ ರ ೨ ಸಾಲು.
ಕ್ಯಾಲೆಂಡರ್: (kya -lender ??)
never gives you a day extra,even the costliest calender also has only 12 months.
ದುಂಡಿಗೆ ಈ ಯೋಚನೆ ಯಾಕ್ ಬಂತೊ ಗೋತ್ತಿಲ್ಲ ! ಆದ್ರೆ ನನ್ನ ಬದುಕಿನ ಈ ದಿನ ಮಾತ್ರ ನನ್ನಲ್ಲಿ ಆ ಯೊಚನೆ ಇದೆ. ನಂಗೆನೂಜಾಸ್ತಿ ಕೊರಗಿಲ್ಲ ,ಆದ್ರೆ ಕ್ಯಾಲೆಂಡರ್ ಜೊತೆ ಬದುಕೊ ಜನದ ಜೊತೆ ಇರೋದ್ರಿಂದ ನಾನು ಸ್ವಲ್ಪ ಯೋಚನೆ ಮಾಡ್ಬೆಕಿದೆ.
ಇಷ್ಟೋಂದು ವರ್ಷ ಆದ ಮೇಲೂ ನಂಗೆ ಸಣ್ಣ ಅನುಮಾನ ಇದೆ. ಹುಟ್ಟಿದ ಮೇಲೆ ಬದುಕೊದೆ ಅತೀ ದೊಡ್ಡ ಕೆಲಸವಾ ಅಂತ ?
ಭಾವನೆಗಳಿಲ್ಲದೆ ಬದುಕೊದು ಹೇಗೆ ಅಂತ ಇಗೀಗ ಗೊತ್ತಾಗ್ತ ಇದೆ. ಅದಕ್ಕೆ ಜನ professionalism,casuality ಅಂತೆಲ್ಲಾಕರಿತಾರೆ.ಮತ್ತೆ "Flirting is an art " ಅಂತ ಪುಷ್ಟಿ ಬೇರೆ. ಛೇ ಇದೆಲ್ಲ ಬದುಕಾ ಅಂತ ಬೇಸರವಾದ್ರೆ ಮುಗಿಯಲ್ವೆ, ಬುದ್ದಿ ಇದೆಅಂದ್ಮೇಲೆ ಬದುಕು ಏನು ಅಂತ ಕಂಡು ಹಿಡಿಲೇ ಬೇಕು.
ಈಗ ವಿಷಯಕ್ಕೆ ಬರ್ತಿನಿ, ನನ್ನ ಈ ವರ್ಷ ಹೇಗಿತ್ತು ಅಂದ್ರೆ ಮರ್ತು ಮುಂದೆ ಹೋಗೊ ಹಾಗೆ ಇತ್ತು.ಸಾಕಷ್ಟು ಯಶಸ್ಸು ದೊರಕಿದ್ರುಕೆಲವು ಕಹಿ ವಿಚಾರ ಮಾತ್ರ ಮಾಯದೆ ಇರುವ ಗಾಯ ಮಾಡಿವೆ.
ಎಲ್ಲೊ ಒಂದು ಕಡೆ ಜೀವನ research project ಆಗೋ ಥರ ಕಾಣ್ತಿದೆ. searching and searching ending up finding nothing ! :).
ಇಷ್ಟು ವರ್ಷ ಸಮಯದ ವಿಧೇಯ ವಿದ್ಯಾರ್ಥಿಯಾಗಿದ್ದ ನಾನು ಈಗೀಗ ಪ್ರಶ್ನೆ ಕೆಳಲು ಪ್ರಾರಂಭ ಮಾಡಿದ್ದೆನೆ.
ಎಲ್ಲೋ ಒಂದು ಕಡೆ ನಾನಿನ್ನು ಕೂಸು ಅಂತ ಅನ್ನಿಸುತ್ತೆ, ಅಪ್ಪ , ಅಮ್ಮನ ನೆನ್ಸ್ಕೊಂಡಾಗೆಲ್ಲ ಮನವರಿಕೆ ಆಗುತ್ತೆ,ಬದುಕಿರೊದೆಬದುಕೊದು ಹೇಗೆ ಅಂತ ಕಲಿಯೊದಕ್ಕೆ ಅಂತ ! ಕಲಿತ್ಮೆಲೆ ಇನ್ನೊಬ್ಬರಿಗೆ ಅವಕಾಶ ಅಷ್ತ್ಟೆ.
ದಿನಾ ಸವೆಯುತ್ತಿರುವ ಮೇಣಕ್ಕೆ ಗೊತ್ತೆ , ಯಾಕೆ ಸೊರಗುತಿಹುದೆಂದು.
ಸ್ವತಃ ಕರಗುತಿರುವ ದಿನ ಹೊಣೆಯೆ ?
ಕರಗುವ ಸೊರಗುವ ದಿನಗಳ ನಡುವೆ ಮೆರೆವ ದಿನದ ಹುಡುಕಾಟ.
ಬದುಕಿರೊವಷ್ಟು ದಿನ ಹೋರಾಟ.
ನನ್ ಹತ್ರ ಒಂದು ಹಡಗಿದೆ, ನಾನು ಸಾಗರದಲ್ಲಿದ್ದೆನೆ. ತೀರದ ಕಡೆಗೆ ಹೋಗ್ಬೆಕು ಅಂತ ಹುಟ್ಟು ಹಾಕ್ತ ಇದ್ದೆನೆ. ನನ್ ಜೊತೆ ಬಹಳಜನ ಇದ್ದ್ರು ಒಬ್ಬೊಬ್ರೆ ಬೇರೆ ಹಡಗು ಬಂದಾಗ ಆ ಕಡೆ ಹೊಗಿದ್ದಾರೆ. ಆದ್ರೆ ಈಗ ಉಳಿದಿರೊದ್ರಲ್ಲಿ ಕಳಚ್ಕೋಳೊರು ಕಡಿಮೆ ಇದ್ದಾರೆ. ಬಹಳ ಸಲ ಗಾಳಿ ನನಗೆ ಎದುರಾಗಿ ಬರುತ್ತೆ. ನಂಗೆ ಮಾತ್ರ ಗಾಳಿ ಬಡಿತಾ ಇದೆಯೆನೋ ಅನ್ಸುತ್ತೆ, ಜೊತೆಗಿರೊರ್ಬಗ್ಗೆ ಒಂದು ಸ್ವಲ್ಪಹೊತ್ತು ಮರ್ತೋಗುತ್ತೆ,ಆಮೇಲೆ ಮತ್ತೆ ನೆನಪಾಗುತ್ತೆ,
ಬರಿ ದಡ ಮುಟ್ಟಿದ್ರೆ ಸಾಲದು, ಮೊದ್ಲು ದಡ ಮುಟ್ಟಬೇಕು ಅಂತ.
ದಡಕ್ಕೆ ಗಾಳಿ ಮುಟ್ಸುತ್ತೊ ನಾನೆ ಮುಟ್ಟ್ತಿನೋ ಗೊತ್ತಿಲ್ಲ.
ಮತ್ತೊಂದು ಕವನ ನೆನಪಾಗ್ತಿದೆ , ಕೆ.ಯೆಸ್.ನಿಸ್ಸಾರ್ ಅಹ್ಮದ್ರದ್ದು,
ಹರಿವಿನ ದಿಕ್ಕಿಗೆ ಸಾಗಲು ಕೊಳೆತೊಂದು ಕಡ್ಡಿ ಸಾಕು.
ಪ್ರವಾಹಕ್ಕೆದುರಾಗಿ ಈಜಲು ಜೀವಂತ ಮತ್ಸ್ಯವೇ ಬೇಕು.
-ಒಂದು ವರ್ಷ

ಮಾರ್ಚ್ 17, 2008
ನೆನಪಿರುವ ಒಂದು ಮಾತು
ಮುಳುಗಲು ಸಾಧ್ಯವೇ ಇಲ್ಲ ಎಂದು ಬಣ್ಣಿಸಲಾದ ಟೈಟಾನಿಕ್ ಕೂಡಾ ಮುಳುಗುತ್ತದೆ.
ಸಹಸ್ರ ಬದುಕುಗಳ ಭಗ್ನ ಪ್ರತಿಮೆಗಳನ್ನು ಸೃಷ್ಟಿಸುತ್ತದೆ ಆದರೆ ಮಾನವನ ಆಶೋತ್ತರಗಳ ನೌಕೆ ಎಂದಿಗೂ ಮುಳುಗಲು ಸಾಧ್ಯವಿಲ್ಲ.
ನಿರುದ್ಯೋಗ,ಹಸಿವು,ಬಡತನ ಅಂತಸ್ತುಗಳಂತಹ ಸಾವಿರಾರು ನೀರ್ಗಲ್ಲಿನ ಬಂಡೆಗಳಿಗೆ ಅಪ್ಪಳಿಸಿದಷ್ಟೂ ಅದು ಗಟ್ಟಿಯಾಗುತ್ತದೆ. -- ಸುಧಾ ವಾರ-ಪತ್ರಿಕೆ ಮೇ ೧೦,೧೯೯೮

ನನ್ನ ಸಣ್ಣ ಕವಿತೆಗಳು
೧)ನೀನು:
ಓಲವ ಜಲವರಸಿ ಹೊರಟಾಗ ಸಿಕ್ಕ
ಓಲುಮೆಯ ಸರೋವರ
ನಿನ್ನ ತುಂಬಾ ಪ್ರೀತಿಯ ಕಮಲಗಳು
ಮತ್ತೆ ..ಮತ್ತೆ.. ಸವಿನುಡಿಯ ಹಂಸಗಳು.
೨)ನೀನು:
ಬಾನ ತುಂಬಾ ತಾರೆಗಳಿರಬಹುದು,
ಶಶಿಯಲ್ಲವೆ ಕೇಂದ್ರ ಬಿಂದು.
ಊರ ತುಂಬಾ ನೀರೆಯರಿರಬಹುದು,
ನೀ ನನ್ನ ಪ್ರೇಮಸಿಂಧು.
೧)ನಮ್ಮ ಪ್ರೀತಿ:
ಚಂದ್ರ-ತಾರೆಗಳಿರುವತನಕ,
ನದಿ ಸಾಗರ ಬತ್ತುವ ತನಕ,
ಭೂಮಿ ಬಿರಿಯುವ ತನಕ,
ಬೆಳೆದು, ಬೆಳೆದು,
ಬೆಳೆವ ಜೀವಳಿಗೆ ಸ್ಮಾರಕ.
ಓಲವ ಜಲವರಸಿ ಹೊರಟಾಗ ಸಿಕ್ಕ
ಓಲುಮೆಯ ಸರೋವರ
ನಿನ್ನ ತುಂಬಾ ಪ್ರೀತಿಯ ಕಮಲಗಳು
ಮತ್ತೆ ..ಮತ್ತೆ.. ಸವಿನುಡಿಯ ಹಂಸಗಳು.
೨)ನೀನು:
ಬಾನ ತುಂಬಾ ತಾರೆಗಳಿರಬಹುದು,
ಶಶಿಯಲ್ಲವೆ ಕೇಂದ್ರ ಬಿಂದು.
ಊರ ತುಂಬಾ ನೀರೆಯರಿರಬಹುದು,
ನೀ ನನ್ನ ಪ್ರೇಮಸಿಂಧು.
೧)ನಮ್ಮ ಪ್ರೀತಿ:
ಚಂದ್ರ-ತಾರೆಗಳಿರುವತನಕ,
ನದಿ ಸಾಗರ ಬತ್ತುವ ತನಕ,
ಭೂಮಿ ಬಿರಿಯುವ ತನಕ,
ಬೆಳೆದು, ಬೆಳೆದು,
ಬೆಳೆವ ಜೀವಳಿಗೆ ಸ್ಮಾರಕ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಈ ಬ್ಲಾಗ್ ಅನ್ನು ಹುಡುಕಿ
- ಏಪ್ರಿಲ್ 2020 (1)
- ಮಾರ್ಚ್ 2020 (1)
- ಸೆಪ್ಟೆಂಬರ್ 2019 (1)
- ಸೆಪ್ಟೆಂಬರ್ 2017 (2)
- ಅಕ್ಟೋಬರ್ 2010 (1)
- ಮೇ 2010 (5)
- ಏಪ್ರಿಲ್ 2010 (8)
- ನವೆಂಬರ್ 2008 (1)
- ಆಗಸ್ಟ್ 2008 (1)
- ಜುಲೈ 2008 (5)
- ಜೂನ್ 2008 (3)
- ಮೇ 2008 (3)
- ಮಾರ್ಚ್ 2008 (5)