ಜುಲೈ 22, 2008

ಮರೆಯಾದ ಗೆಳೆಯನಿಗೆ ನಮನ


ದಿನಾ ಸವೆಯುತ್ತಿರುವ ಬದುಕಿನ ಮತ್ತೋಂದು ಪುಟ ಬೆಳೆಯುವುದನ್ನ ನಿಲ್ಲಿಸಿದೆ. ಚೆನ್ನೈನ ಬಿರು ಬಿಸಿಲಿನಲ್ಲೂ ಬದುಕಿನ ಚಿಲುಮೆಯನ್ನ ಕಂಡುಕೊಂಡಿದ್ದ ಮತ್ತು ನನಗೆ ತೋರಿಸಿದ್ದ ಸಾಜನ್ ಮರೆಯಾಗಿದ್ದಾನೆ. ಅವನೊಂದಿಗೆ ಆಫ಼ೀಸಿನಲ್ಲಿ ಕಳೆದ ೬ ತಿಂಗಳುಗಳೆ ನನಗೆ ದಕ್ಕಿದ ಸಮಯವಾಗಲಿದೆ.

ತುಂಬಾ ಚುರುಕಾಗಿದ್ದ, ಮತ್ತು ತುಂಬಾ ಚಿಕ್ಕವನಾಗಿದ್ದ ಹಾಗೂ ಜೀವನ್ಮುಖಿಯಾಗಿದ್ದ ಹುಡುಗನ ಸಾವನ್ನು ನಂಬುವುದಕ್ಕೆ ಆಗುತ್ತಿಲ್ಲ. ಸದಾ ಸಂತೋಷವಾಗಿರುತ್ತಿದ್ದ ನಗುಮುಖದ ಗೆಳೆಯನ ನಗೆ ಮರೆಯಾಗಿ ಹೋಗಿದೆ.

ಕಾಲನ ಕ್ರೂರತೆಯನ್ನ ದೈನ್ಯವಾಗಿ ನೋಡಿ , ಅಸಹಾಯಕತೆಗೆ ಮರುಗುವ ದಿನ ಮತ್ತೊಮ್ಮೆ. ಅವನ ಆತ್ಮಕ್ಕೆ ಶಾಂತಿ ಮತ್ತು ಕುಟುಂಬಕ್ಕೆ ಶಕ್ತಿಯನ್ನ ಭಗವಂತನಲ್ಲಿ ಬೇಡುತ್ತೇನೆ. ಹಾಗೆ ಅವನಿಗೆ ಮತ್ತೋಂದು ಅವಕಾಶವನ್ನು ಕೂಡಾ.





ಅವನು ನನಲ್ಲಿ ತೋರಿಸಿದ ಪ್ರೀತಿ, ವಿಶ್ವಾಸಗಳು ನನ್ನಲ್ಲಿ ಸಾಲವಾಗಿ ಉಳಿಯಲಿವೆ. ಅವನು ನನಗೆ ಉಡುಗೊರೆಯಾಗಿ ಕೊಟ್ಟ ಬ್ಯಾಗ್ ಅವನ ನೆನಪಾಗಿದೆ. ಅವನು ನನಗೆ ನನ್ನ ಕೊನೆ ಭೇಟಿಯಲ್ಲಿ ನೀಡಿದ್ದ ಆರ್ಛಿಸ್ ಕಾರ್ಡ್ , ನನಗಾಗಿ ಕೋರಿದ್ದ ಶುಭ್ಹಾಶಯಗಳು ಅವನ ಮುಖವನ್ನ ಮರೆಯಾಗದಂತೆ ಮಾಡಿವೆ.
ಅಪರೂಪದ ಕಲಾವಿದನಾಗಿದ್ದ ಗೆಳೆಯನ ಪುಟ್ಟ ಪಾತ್ರದ ಬಗ್ಗೆ ದುಃಖವಾಗುತ್ತಿದೆ. ಕಲಾವಿದ ನಿರ್ದೇಶಕನ ಬಗ್ಗೆ ಮಾಡಬಹುದಾದ ಟೀಕೆ ಮತ್ತು ವಿಮರ್ಶೆಗಳಿಗೆ ಅರ್ಥ ಸ್ವಲ್ಪ ಕಡಿಮೆಯೆ ಆದರೂ ಅಸಮಾಧಾನ ಮಾತ್ರ ಇದೆ.

ಪ್ರೀತಿಯ ಸಾಜನ್ ನಿನ್ನ ಸವಿನೆನಪುಗಳಲ್ಲಿ, ನೀ ನನ್ನಲ್ಲಿ ತೋರಿದ ಸ್ನೇಹಕ್ಕೆ ರುಣಿಯಾಗಿದ್ದೆನೆ. ನನಗೆ ಗೊತ್ತಿದೆ, ಮತ್ತು ನಿನಗೂ ಗೊತ್ತಿದೆ,
Living is a Task and Show must Go ON

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ