ಜುಲೈ 25, 2008

ಬೆಂದಕಾಳೂರಿನಲ್ಲೂ ಬೇಯಿಸಲು ಬಂದಿರುವ ಬಾಂಬು ಮತ್ತು ಮನುಷ್ಯತ್ವದ ಪ್ರಶ್ನೆ

ಬೆಂಗಳೂರಿಗೂ ಬಾಂಬು ಬಂದಿದೆ. ಬೆಂಗಳೂರಿನ ಪ್ರಶಾಂತತೆಗೆ ಸೋತು ಇಲ್ಲಿ ನೆಲೆಸಿರುವ ಮುಂಬೈ ಮತ್ತು ಕಾಶ್ಮೀರದ ಜನರು ಕೂಡ ದಂಗಾಗಿದ್ದಾರೆ.
ಇಂಥಹ ವಿಚಿತ್ರದ ಬಗ್ಗೆ ಅರಿವಿಲ್ಲದ ಖಾಸಾ ಬೆಂಗಳೂರಿನ ಜನ ಕಂಗಾಲಾಗಿದ್ದಾರೆ.

ಬಾಂಬುಗಳೆಂದರೆ ಬರಿ ಗಡಿಯಲ್ಲಿ ವೈರಿಗಳೊಂದಿಗೆ ಹೋರಾಡುವ ಸಾಧನವೆಂದಷ್ಟೆ ಕಲ್ಪನೆಯಲ್ಲಿರುವ ಉತ್ತರ ಕರ್ನಾಟಕದ ಹಳ್ಳಿಗರಂತು ಬೆಂಗಳೂರು ಬದುಕುವ ಜಾಗವಲ್ಲವೆಂದು ನಿರ್ಧರಿಸಲೂ ಸಾಕು.

ಕಾಶ್ಮಿರದಲ್ಲಿ ಕೆಲ ದಿನಗಳ ಹಿಂದೆ ೭ ದಿನಗಳ ಕರ್ಫ಼್ಯೂ ಇತ್ತು. ಜನ ಅಲ್ಲಿಯೂ ತುಂಬಾ ತೊಂದರೆಗೀಡಾದರು. ಅಸ್ಸಾಂ,ಮುಂಬೈ,ಕಾಶ್ಮಿರ ಗಳಲ್ಲಿಯ ಬಾಂಬುಗಳಿಗಿರುವ ಸಮಜಾಯಿಷಿಯನ್ನ ಬೆಂಗಳೂರಿನ ಸ್ಪೋಟಗಳಿಗೆ ಕೊಡಲು ಸಾಧ್ಯವೇ ಇಲ್ಲ. ಅಲ್ಲಿಗೆ ಈ ಬಾಂಬುಗಳು ಸ್ವಾತಂತ್ರ್ಯ ಮತ್ತು ಅಸ್ಥಿತ್ವಕ್ಕೆ ಹೋರಾಡುವವರ ಆಯುಧಗಳೇ ಅಲ್ಲ. ಅದೊಂದು ವಿಕ್ರುತ ಮನಸ್ಸಿನ ಕೈಯಲ್ಲಿರುವ ಅಪಾಯಕಾರಿ ಆಯುಧ.

ಅದನ್ನ ಬಳಸಲು ಆ ವಿಕ್ರುತ ಮನಸ್ಸು ನೀಡುವ ಕಾರಣಗಳೆಲ್ಲ, ನಂತರ ಹುಡಿಕಿದವೇ ಹೊರತು, ಸ್ಪಷ್ಟ ಉದ್ದೇಶವಿರುವ ವಿವೇಕಿಯೊಬ್ಬ ಇಂಥಹ ಒಂದು ಕಲ್ಪನೆಯನ್ನೂ ಮಾಡಲಾರ. ಮತ್ತೋಂದು ವಿಷಯ ಬಾಂಬುಗಳನ್ನ ತಡೆಯಬಹುದೆ ಹೊರತು, ಬಾಂಬು ಸಿಡಿಯುವುದನ್ನಲ್ಲ.
ಬಾಂಬು ಎಲ್ಲಿಂದ ಬಂದರೂ ಎಲ್ಲಿ ಬಿದ್ದರೂ ಆಗುವುದು ಒಂದೆ, ನಾಶ.

ನನಗೇನೋ ಇದನ್ನೆಲ್ಲಾ ನೋಡಿ ಮನುಷ್ಯನೆಂಬ ಪ್ರಾಣಿಯ ಸಾಮಾಜಿಕ ಜೀವನದ ಕಲ್ಪನೆಯೆ ಅರ್ಥವಾಗುತ್ತಿಲ್ಲ.ಒಂದು ಧರ್ಮದ ಸಾಮಾಜಿಕ ಕಲ್ಪನೆ ಇನ್ನೋಂದು ಧರ್ಮದ ಕಲ್ಪನೆಯ ಜೊತೆಗೆ ಜನರನ್ನ ಕೊಲ್ಲುವುದು, ಓಂದು ಭಾಷೆಯ ಸಾಮಾಜಿಕ ಕಲ್ಪನೆ ಮತ್ತೋಂದು ಭಾಷೆಯ ಜನರನ್ನ ಕೊಲ್ಲುವುದು. ಓಂದು ಪ್ರಾದೇಶಿಕ ಸಮಾಜದ ಕಲ್ಪನೆ ಮತ್ತೋಂದು ಪ್ರದೇಶದ ಜನರನ್ನ ಕೊಲ್ಲುವುದು ವಿಚಿತ್ರವಾಗಿದೆ. ಮತ್ತು ಪ್ರಕ್ರುತಿಯ ನಿಯಮಕ್ಕೂ ವಿರುದ್ದವಾಗಿದೆ.

ನ್ಯಾಶನಲ್ ಜಿಯೋಗ್ರಾಫ಼ಿಯನ್ನ ದಿನಾ ನೋಡುತ್ತೆನೆ, ಹುಲಿ ಹುಲಿಯನ್ನ ಬೇಟೆಯಾಡುವುದು, ನರಿ ನರಿಯನ್ನ ತಿನ್ನುವುದನ್ನ ನೋಡೇ ಇಲ್ಲ.
ಈ ದರಿದ್ರ ಮನುಷ್ಯನ ಬುದ್ದಿ ಅರ್ಥವಿಲ್ಲದ ತಾನೆ ಹೆಣೆದ ಬಲೆಯಲ್ಲಿ ಬಿದ್ದಿದೆ. ಸ್ಪರ್ದೆಯ ಜಾಗಕ್ಕೆ ಹೊಂದಾಣಿಕೆ ಬರಬೇಕಿದ್ದ ಸ್ವಚ್ಛ ಸಮಾಜ ರಿವರ್ಸ್ ಗೇರ್ನಲ್ಲಿದೆ, ಹೊಂದಾಣಿಕೆಯ ಜಾಗದಲ್ಲಿ ಗೆಲುವೇ ಇಲ್ಲದ ಸ್ಪರ್ದೆ ಬಂದಿದೆ.

ಇದು ಹೀಗೆ ಇರೊದಾದ್ರೆ ಸಮಾಜದ ಕಲ್ಪನೆಯನ್ನ ಬಿಡೋದೆ ಒಳ್ಳೇದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ