ಜುಲೈ 31, 2008

ಹಣ ಮತ್ತು ಹಸಿವು ಹಾಗೂ ದೇವರ ಹೆಣ

ಬೀರ ಕಾಲೇಜಿನಲ್ಲಿದ್ದಾಗ ಒಂದು ಸಲ ಹೇಳಿದ್ದ , ಮನುಷ್ಯ ಕಂಡು ಹಿಡಿದ ಅತೀ ಕೆಟ್ಟ ವಸ್ತು ಅಣುಬಾಂಬ್ ಅಲ್ಲ , ಹಣ ಅಂತ.
ಕುರುಡು ಕಾಂಚಾಣ ಕುಣಿಯುತಲಿತ್ತು ಕಾಲಿಗೆ ಬಿದ್ದೋರ ತುಳಿಯುತಲಿತ್ತು . ಕಾಲಿಗೆ ಬೆಳದಿರುವವರ ಗತಿ ಏನು ? ಅವರೇನು ಆರಮಾಗಿದ್ದರ ? ಬೇಂದ್ರೆಯವರೇ ಹೇಳಿದ ಇನ್ನೊಂದು ಮಾತಿದೆ ,

"ನೀನು ಅನ್ನವನ್ನು ತಿನ್ನದಿದ್ದರೆ ಅನ್ನ ನಿನ್ನನ್ನ ತಿನ್ನುತ್ತದೆ "

ಅನ್ನ ಕಾಂಚಾಣದ ಕಾಲ ತುದಿಗೆ ಬಂದು ಕುಳಿತಿದೆ , ಮಾನವನ ಬದುಕಿನ ಬೆಳವಣಿಗೆ ಅವನಲ್ಲಿ "ಅನ್ನ","ನೀರು","ಗಾಳಿ" , "ಬಟ್ಟೆ","ಸೂರು" ,"ಸಾಂಗತ್ಯ" ಕ್ಕೆ ಮೀರಿದ ಯಾವುದೋ ಆಸೆಗಳನ್ನ ಹುಟ್ಟು ಹಾಕಿದೆ. ಆ ಆಸೆ ಬಹುಶ ಭವಿಷ್ಯದ ಬಲವರ್ಧನೆ ಅಥವಾ ಇನ್ನೇನೋ ?

ಭವಿಷ್ಯಕ್ಕಾಗಿ ಬಹಳಷ್ಟು ಜನ ಮಾಡುವ ಒಂದೇ ಕೆಲಸ ಸಂಪತ್ತನ್ನ ಕೂಡಿಡುವುದು. ಅದು ನೆಲ ಮತ್ತು ಹಣದ ರೂಪದಲ್ಲಿ , ಮರ್ತಿದ್ದೆ ಬಂಗಾರದ ರೂಪದಲ್ಲಿ . ಗಾಂಧಿಜಿಯವರು ಹೇಳೋ ಪ್ರಕಾರ ಅವಶ್ಯಕತೆಗಿಂತ ಹೆಚ್ಚು ಏನನ್ನೇ ಕ್ರೋಢಿಕರಿಸಿದರು ಅದು ಕಳ್ಳತನವೆ ಸರಿ.

ಪೂರ್ಣ ಗಾಂಧಿಗಿರಿ ಸಾದ್ಯವಿಲ್ಲ ಎನ್ನುವ ಅಭಿಪ್ರಾಯ ನನಗೂ ಇದೆ , ಭವಿಷ್ಯ ನಿಧಿ ಇರಲಿ , ಎಸ್ಟಿರಬೇಕು ಎನ್ನುವ ಆಲೋಚನೆ ಯಾರೂ ಮಾಡುವುದಿಲ್ಲ , ಆಗಲೇ ಕಳ್ಳತನ ಕ್ರೂರಿಯಾಗುವುದು ,ಅಗತ್ಯವಿಲ್ಲದೆ ಇರುವ ಮಿತಿಯಿರದ ಇನ್ನು , ಹಣ ತರುವ "ಕೊಳ್ಳುವ ಶಕ್ತಿ" (buying power) ಮೇಲೆ ಎಲ್ಲರ ಕಣ್ಣು , ಏನು ಕೊಳ್ಳಬೇಕು ಎನ್ನುವುದು ಭವಿಷ್ಯ , ಹಾಗಾಗಿ ಹಣದ ದಾಹಕ್ಕೆ ಕೊನೆ ಇಲ್ಲ.

ಇನ್ನು ಹಸಿವಿನ ವಿಷಯ , ಬೆಳೆಯುವ ಭೂಮಿಯೆಲ್ಲ ಕಾಂಕ್ರೀಟ್ ಕಾಡು ಆದ ಮೇಲೆ ಬಂದಿರುವ ಅನ್ನದ ಬರಕ್ಕೆ ಮನುಷ್ಯ ತಿನ್ನದೇ ಇರುವ ವಸ್ತು ಸಿಗುವುದು ಅಪರೂಪ ಅಂದುಕೊಳ್ತೀನಿ . ಪ್ರತಿ ವರ್ಷವು ಕೇಳಿ ಬರುವ ರೈತನ ಆತ್ಮ ಹತ್ಯೆ , ಗೊಬ್ಬರದ ಅಭಾವ , ಬೆಂಬಲ ಬೆಲೆಯ ಸರ್ಕಸ್ ಇದೆಲ್ಲ ನೋಡಿದರೆ , ನಾನು ಹೆಚ್ಚು ಬೆಲೆ ಕೊಟ್ಟು ಕೊಳ್ಳುತ್ತಿರುವುದರ ಲಾಭ ರೈತನಿಗೆ ಯಾಕೆ ಹೋಗ್ತಾ ಇಲ್ಲ ಅಂತ ಪ್ರಶ್ನೆ ಹುಟ್ಟುತ್ತೆ . ಸ್ಥಿತಿವಂತ ರೈತರು ಹುಷಾರಾಗಿದ್ದಾರೆ , ದಲ್ಲಾಳಿ ಗಳು ಮಾಡುತ್ತಿದ್ದ ಕೆಲಸ ತಾವೇ ಮಾಡ್ತಿದ್ದಾರೆ .
ಸಣ್ಣ ಪುಟ್ಟ ರೈತರ ಬೆಳೆ ಕಡಿಮೆ ಬೆಲೆಗೆ ಖರೀದಿ ಮಾಡೋದು , ದಾಸ್ತಾನಿಟ್ಟು ಅಭಾವ ಸೃಸ್ತಿಸೋದು , ಬೆಲೆ ಜಾಸ್ತಿ ಆದಾಗ ಮಾರಿ ಲಾಭ ಹೊಡೆಯೋದು , ಬೆಲೆ ಕಡಿಮೆ ಆದ್ರೆ ಮತ್ತೆ ಚಿಕ್ಕ ರೈತರನ್ನ ಬೀದಿಗಿಲಿಸಿ ಬೆಂಬಲ ಬೆಲೆ ಕೇಳೋದು .ಬೆಳೆಯ ಸಾಲಮನ್ನಾ , ರೈತರ ಸಾಲಮನ್ನಾ , ಕೊಟ್ಟವನು ಕೋಡಂಗಿ , ಇಸ್ಕಂದವನು ಈರಭದ್ರ , ಏನೇ ಮಾಡಿದ್ರು , ಬಡವರ ಜೀವಮನ್ನಾ.

ಬುದ್ದಿ ಬರಲಿ ಅಂತ ಪುಕ್ಸಟ್ಟೆ ಸ್ಕೂಲಗಿದ್ದರು ಕಲಿಯನ್ಗಿಲ್ಲ , ಪುಕ್ಸಟ್ಟೆ ಆಸ್ಪತ್ರೆ ಅದ್ರ ಅವಸ್ತೆ ಕೇಳಂಗಿಲ್ಲ , ನೋಡೋಕೆ ಸವಲತ್ತಿದ್ರು ಏನು ಸಿಗೋ ಹಂಗಿಲ್ಲ , ಕುದ್ರೆಗೆ ನೀರು ತೋರಿಸ ಬಹುದು , ಕುದಿಸೋಕಾಗ್ತ್ಹಾದ ? ಬುದ್ದಿ ಕಲಿಯದವರಿಗೆ ಅಳಿವೆ ವರದಾನ . ಎಲೆಕ್ಷನ್ ಸರಾಯಿ ಕುಡುದು ಸಾಯೋ ಬುದ್ದಿಗೆ ಬಡತನದ ಬಟ್ಟೆ ತೊಡಿಸಿ ಸಿಂಗಾರ ಎಷ್ಟು ದಿನ ಮಾಡೋದು . ಪಾಠ ಕಲಿಯಲೆಬೀಕು , ಸಮಯ ಕಲಿಸುವಾಗ ಕರುಣೆಯಿಲ್ಲದೆ ಕೊಲ್ಲುತ್ತದೆ . ರೆಸೆರ್ವಷನ್ನು ಕ್ಯಾಟ್ ಗೋರಿ ಇನ್ನೆನ್ನಾದರು ಬಾಕಿ ಇದೆಯಾ ??
ಹೀಗೆ ಇರುವ ರೆಸೆರ್ವೆಶನ್ನಿನ್ನ ಲಾಭ ಸ್ಥಿತಿವಂತರಿಗೆ ಮಾತ್ರ ಸಿಗುತ್ತಿದೆ , ಇದನ್ನ ಬದಲಾಯಿಸುವ ಸಮಯ ಈಗ ಬಂದಿದೆ , ರೆಸೆರ್ವಷನ್ನು , ಸವಲತ್ತು ಗಳನ್ನ ಅರ್ಹ ಬಡವರಿಗೆ ಯಾವುದೇ ಜಾತಿ ಬೇಧವಿಲ್ಲದೆ ನೀಡಬೇಕು. ಬಹುಸಂಖ್ಯಾತರು , ಅಲ್ಪಸಂಖ್ಯಾತರು,
ಯಾರಪ್ಪ ಇವರೆಲ್ಲ ೧೦೦ ಕೋಟೀಮುಟ್ಟಿದ ಮೇಲೆ ? , ನೂರು ಮಕ್ಕಳ ಹಡೆದ ಅಲ್ಪರು. ಇದಕ್ಕೆ ಅಲ್ವೇ ಇವತ್ತು ನಕ್ಸಲ ರಾಕ್ಷಸರು , ಹುಟ್ಟಿರುವುದು .
ಇವತ್ತಿನ ಸಾಮಾಜಿಕ ಅಸಮಾನತೆ ಜಾತಿ ಅಧಾರಿತವಾಗಿಲ್ಲ, ಇದು ಅಂತಸ್ತು ಗಳ ಅಸಮಾನತೆ , ನೂರಾರು ಗೊಂದಲಗಳನ್ನ ಕೊಂದು, ಪ್ರತಿಯೊಂದಕ್ಕೂ ಬ್ರ್ಹಮನರನ್ನ , ಮೇಲ್ಜಾತಿಯವರನ್ನ ತೆಗಳುತ್ತ ಹಳೆ ರೋಗಕ್ಕೆ ಮದ್ದು ಕೊಡಬೇಡಿ , ಈಗ ರೋಗ ಬದಲಾಗಿದೆ . ಹೊಸ ರೋಗ ಹಸಿವನ್ನ ಮತ್ತು ಬೊಜ್ಜನ್ನ ಹುಟ್ಟು ಹಾಕುತ್ತ ಇದೆ , ಎಲ್ಲ್ಲ ಕಡೆಯಿಂದ ಬೊಜ್ಜು ಕತ್ತರಿಸಿ .

ಎಲ್ಲಾ ತರಹದ ಸಮಸ್ಯೆಗಳಿದ್ದರು ಆರಾಮಾಗಿರೋದು ದೇವರು ಮಾತ್ರ, ವಜ್ರದ ಕಿರಿಟ , ಬಂಗಾರದ ಕವಚ , ಬೆಳ್ಳಿ ರಥ , ಜೆಹಾದ್ ಸೈನ್ಯ , ಏನೆಲ್ಲಾ ಇದೆ , ಜನಕ್ಕೆ ಬದುಕಲು ಕಲಿಸುವ ಸಲುವಾಗಿ ಹುಟ್ಟಿದ ದೇವರ ಕಲ್ಪನೆಯನ್ನ , ಹಣದ ಹಸಿವಿನ ರಾಕ್ಷಸರು ಕೊಲ್ಲುತ್ತಿದ್ದಾರೆ . ಈಗೆಲ್ಲ ಪಾಪ ಪರಿಹರಿಸುವ ದೇವರಿಗೆ ಕಿಮ್ಮತ್ತು , ಏನೆಲ್ಲಾ ಹಾರಾಮಿ ಕೆಲಸ ಮಾಡಬೇಕು ದೇವರನ್ನ ಖುಷಿ ಪಡಿಸಲು , ಅವರಿವರ ತಲೆ ಹೊಡೆದು ವಜ್ರ , ವೈಡೂರ್ಯ ಕೊಡಬೇಕು , ಸಾವಿರಾರು ಜೀವ ತೆಗೆದು ರಕ್ತ ತರ್ಪಣ ಮಾಡಬೇಕು . ಇಲ್ಲಿರುವುದು ದೇವರಲ್ಲ , ಹಣ ಮತ್ತು ಹಸಿವು ಹಾಗೂ ದೇವರ ಹೆಣ, ಅದರ mummy ಜೊತೆಗೆ ಸುಘಂದ ಪುಷ್ಪಾದಿಗಳು , ಹಾವನ್ನ ತಿನ್ನೋ ಹದ್ದುಗಳು ದೇವ ಮಾನವರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್ ಅನ್ನು ಹುಡುಕಿ